ಭುವನೇಶ್ವರ: ದೇಶ ಸೇವೆ ಸಲ್ಲಿಸಲು ಯುವಕರಿಗೆ 'ಅಗ್ನಿವೀರ' ಯೋಜನೆಯು ಅತ್ಯುತ್ತಮ ಅವಕಾಶವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಹೇಳಿದರು.
ಭುವನೇಶ್ವರ: ದೇಶ ಸೇವೆ ಸಲ್ಲಿಸಲು ಯುವಕರಿಗೆ 'ಅಗ್ನಿವೀರ' ಯೋಜನೆಯು ಅತ್ಯುತ್ತಮ ಅವಕಾಶವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಹೇಳಿದರು.
ಒಡಿಶಾದ ಖುರ್ದಾ ಜಿಲ್ಲೆಯ ಐಎನ್‌ಎಸ್ ಚಿಲಿಕಾದಲ್ಲಿ ಶುಕ್ರವಾರ ತರಬೇತಿ ಪಡೆದ ಅಗ್ನಿವೀರರ ನಿರ್ಗಮನ ಪಥಸಂಚಲನದಲ್ಲಿ ತ್ರಿಪಾಠಿ ಅವರು ಭಾಗಿಯಾಗಿದ್ದರು.
ಅಗ್ನಿವೀರ ಯೋಜನೆ ಸುತ್ತ ಹುಟ್ಟಿರುವ ವಿವಾದದ ಕುರಿತು ಕೇಳಿದ ಪ್ರಶ್ನೆಗೆ, 'ಅಂಥ ಯಾವುದೇ ವಿವಾದ ಇಲ್ಲ' ಎಂದಷ್ಟೇ ಉತ್ತರಿಸಿದರು. ಬಾಂಗ್ಲಾದೇಶದ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.