HEALTH TIPS

ಪರಾರಿಯಾಗಲಿಲ್ಲ; ಮಲಯಾಳಂ ಚಿತ್ರರಂಗವನ್ನು ನಾಶ ಮಾಡಬೇಡಿ: ಮೋಹನ್ ಲಾಲ್

                  ತಿರುವನಂತಪುರ: . ಹೇಮಾ ಕಮಿಟಿ ವಿವಾದದ ಸಂದರ್ಭದಲ್ಲಿ ನಾನು ಎಂದಿಗೂ ತಲೆಮರೆಸಿಕೊಂಡಿಲ್ಲ ಎಂದು ನಟ ಮೋಹನ್ ಲಾಲ್ ಹೇಳಿದ್ದಾರೆ.

                  ಅಪರಾಧ ಎಸಗಿದವರಿಗೆ ಶಿಕ್ಷೆಯಾಗಬೇಕು. ವಿವಾದ ಸೃಷ್ಟಿಸಿ ದೊಡ್ಡ ಉದ್ಯಮವನ್ನು ನಾಶ ಮಾಡಬೇಡಿ. ಚಿತ್ರಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಸಂಘಟನೆ ‘ಅಮ್ಮಾ’ ಉತ್ತರಿಸಬೇಕು ಎನ್ನುವುದು ಸರಿಯಲ್ಲ. ಮಲಯಾಳಂ ಚಿತ್ರರಂಗದಲ್ಲಿ ಸುಮಾರು 21 ಸಂಸ್ಥೆಗಳಿವೆ. ಪವರ್ ಗ್ರೂಪ್ ಬಗ್ಗೆ ಗೊತ್ತಿಲ್ಲ. ನಾನು ಯಾವುದೇ ಪವರ್‍ಗ್ರೂಪ್‍ನಲ್ಲಿ ಇಲ್ಲ ಎಮದು ವಿದೇಶದಿಂದ ಇಂದು ಆಗಮಿಸಿದ ನಂತರ ಮೋಹನ್‍ಲಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

              ಮೋಹನ್‍ಲಾಲ್ ಎಲಿದ್ದಾರೆ, ಮತ್ತು ತಲೆಮರೆಸಿಕೊಂಡಿದ್ದಾರಾ ಎಂದು ಕೇಳುತ್ತಾರೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಪತ್ನಿಯ ಚಿಕಿತ್ಸೆಯ ನಿಮಿತ್ತ ಹೊರಗಿದ್ದೆ. ಕಳೆದ 47 ವರ್ಷಗಳಿಂದ ನಾನು ನಿಮ್ಮೊಂದಿಗೆ ಪ್ರಯಾಣಿಸುತ್ತಿದ್ದೇನೆ. ಸಿನಿಮಾ ಸಮಾಜದ ಒಂದು ಭಾಗ ಮಾತ್ರ. ಸಮಾಜದಲ್ಲಿ ಎಲ್ಲೆಲ್ಲಿ ಏನೇನು ನಡೆಯುತ್ತದೋ ಅದೇ ಸಿನಿಮಾದಲ್ಲಿಯೂ ನಡೆಯುತ್ತದೆ. ನಾನು ಅದನ್ನು ಪ್ರೋತ್ಸಾಹಿಸುತ್ತಿಲ್ಲ. ಇಂತಹವುಗಳು ಪ್ರತಿಯೊಂದು ಕ್ಷೇತ್ರದಲ್ಲೂ ನಡೆಯುತ್ತದೆ ಎಂದು ವಿವಾದದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸುವಾಗ ಮೋಹನ್ ಲಾಲ್ ಹೇಳಿದರು.

               ಮಲಯಾಳಂ ಚಿತ್ರರಂಗ ಕುಸಿಯುತ್ತಿದೆ. ತಾನು ನಟನಾ ಕ್ಷೇತ್ರಕ್ಕೆ ಬಂದ ಸಂದರ್ಭ  ಯಾವುದೇ ಸೌಲಭ್ಯ ಇರಲಿಲ್ಲ. ಇದು ಅನೇಕ ಉತ್ತಮ ತಾರೆಯರನ್ನು ಹೊಂದಿರುವ ಉದ್ಯಮವಾಗಿದೆ. ಮಲಯಾಳಂ ಸಿನಿಮಾದತ್ತ ಗಮನ ಹರಿಸಿ ಈ ಕ್ಷೇತ್ರವನ್ನು ಹಾಳು ಮಾಡಬೇಡಿ.

                   ಮಲಯಾಳಂ ಚಿತ್ರರಂಗವು ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ಉದ್ಯಮವಾಗಿದೆ. ವೃತಾ ವಿವಾದಗಳಿಂದ ಅದು ನಿಶ್ಚಲವಾಗಿ ಹೋಗುತ್ತದೆ. ಸಾಮೂಹಿಕ ನಿರ್ಧಾರದ ಪ್ರಕಾರ, ಅಮ್ಮ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿರುವೆ. ಅಮ್ಮದ ನೇತೃತ್ವದಲ್ಲಿ ಯಾರು ಬೇಕಾದರೂ ಬರಬಹುದು. ಮಲಯಾಳಂ ಚಿತ್ರರಂಗವನ್ನು ಉಳಿಸಬೇಕು. ತಪ್ಪುಗಳು ಸಂಭವಿಸಬಹುದು. ಒಂದೇ ಸಂಘಟನೆಯನ್ನು ಶಿಲುಬೆಗೇರಿಸುವುದು ಸರಿಯಲ್ಲ.

                        ಸಿನಿಮಾರಂಗದಲ್ಲಷ್ಟೇ ಅಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಈ ರೀತಿಯ ಸಮಿತಿಗಳು ಇರಬೇಕು. ದಯವಿಟ್ಟು ಎಲ್ಲರೂ ಸಹಕರಿಸಬೇಕು ಮತ್ತು ಮಲಯಾಳಂ ಚಿತ್ರರಂಗವನ್ನು ನಾಶ ಮಾಡದಿರಲು ಪ್ರಯತ್ನಿಸಬೇಕು. 47 ವರ್ಷಗಳಿಂದ ಚಿತ್ರರಂಗದೊಂದಿಗೆ ಒಡನಾಟ ಹೊಂದಿರುವ ವ್ಯಕ್ತಿಯಾಗಿ ಇದು ವಿನಂತಿ ಎಂದು ಮೋಹನ್ ಲಾಲ್ ಮಾರ್ಮಿಕವಾಗಿ ತಿಳಿಸಿರುವರು.

                    ಪೋಲೀಸರು, ನ್ಯಾಯಾಲಯ ಮತ್ತು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮಾಧ್ಯಮಗಳೂ ಕೈ ಜೋಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಸರ್ಕಾರ ಮತ್ತು ಪೋಲೀಸರು ಅಪರಾಧಿಗಳ ವಿರುದ್ಧ ಇದ್ದಾರೆ. ಇದು ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರ. .ಸಿನಿಮಾ ಕ್ಷೇತ್ರದ ಶುದ್ಧೀಕರಣಕ್ಕೂ ಅಮ್ಮಾ ನೆರವಾಗಲಿದೆ. ನಾನು ಪವರ್ ಗುಂಪಿಗೆ ಸೇರಿದವನಲ್ಲ. ನಾನು ಮೊದಲ ಬಾರಿಗೆ ಇದನ್ನು ಕೇಳುತ್ತಿದ್ದೇನೆ, ಸಮಿತಿಯ ವರದಿಯ ಬಗ್ಗೆ ನಿಮ್ಮಂತೆಯೇ ನನಗೂ ಕುತೂಹಲವಿದೆ ಎಂದರು. 

               ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು. ತಾನೊÀಬ್ಬ ಯೋಚಿಸಿದರೆ ಕಾನೂನನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಬಿಕ್ಕಟ್ಟಿನಿಂದ ಹೊರಬಂದು ಮಲಯಾಳಂ ಚಿತ್ರರಂಗವನ್ನು ಪುನರ್ ನಿರ್ಮಾಣ ಮಾಡಬೇಕು. ಕಿರಿಯ ಕಲಾವಿದರ ಸಂಘ ಇರಬೇಕು. ಕಾನೂನು ರಚನೆ ಸಮಿತಿ ಇರುತ್ತದೆ. ತುಂಬಾ ದುಃಖವಿದೆ. ಅಮ್ಮದ ಅಧ್ಯಕ್ಷರಾಗಿ ಅಲ್ಲ. ಬಹುಕಾಲದಿಂದ ಮಲಯಾಳಂ ಚಿತ್ರರಂಗದ ಭಾಗವಾಗಿರುವುದರಿಂದ ಪ್ರತಿಕ್ರಿಯಿಸುತ್ತಿರುವೆ. ಇದು ದೊಡ್ಡ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಯಾಗಬಾರದು ಮತ್ತು ಮಲಯಾಳಂ ಚಿತ್ರರಂಗದ ಕುಸಿತಕ್ಕೆ ಕಾರಣವಾಗಬಾರದು ಎಂದು ಮೋಹನ್ ಲಾಲ್ ಮನತುಂಬಿದ ನುಡಿಗಳಿಂದ ಬಿನ್ನಮಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries