ಕಾಸರಗೋಡು: ಚೆರ್ಕಳ-ಚಟ್ಟಂಚಾಲ್ ನಡುವೆ ಭೂಕುಸಿತ ಕಾಣಿಸಿಕೊಂಡಿದ್ದು, ಹೆದ್ದಾರಿಯಲ್ಲಿ ನಡೆಯುತ್ತಿರುವ ಷಟ್ಪಥ ಕಾಮಗಾರಿಗೆ ಭಾರೀ ತೊಡಕು ಎದುರಾಗಿದೆ. ಚೆರ್ಕಳ ಸನಿಹದ ಕುಂಡಡ್ಕದಲ್ಲಿ ಭೂಕುಸಿತದಿಂದ ವಾಹನ ಸಂಚಾರ ತಡೆಗಟ್ಟಲಾಗಿದೆ. ಮಣ್ಣುಕುಸಿತದಿಂದ ರಸ್ತೆಸಂಚಾರಕ್ಕೆ ತಡೆಯಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಚಂದ್ರಗಿರಿ ಸೇತುವೆ ಹಾದಿಯಾಗಿ ವಾಹನಗಳನ್ನು ಬಿಡಲಾಗುತ್ತಿದೆ.
ಚೆರ್ಕಳದಿಂದ ಚಟ್ಟಂಚಾಲ್ ವರೆಗೆ ಇಳಿಜಾರು ಹಾಗೂ ಕಡಿದಾದ ತಿರುವಿನಿಂದ ಕೂಡಿದ ರಸ್ತೆ ಹೊಂದಿದ್ದು, ಬಿರುಸಿನ ಮಳೆಗೆ ಭಾರೀ ಭೂಕುಸಿತಕ್ಕೆ ಕಾರಣವಾಗಲಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಜಿಲ್ಲಾಡಳಿತ ಸಊಚಿಸಿದೆ.