HEALTH TIPS

ಗುಂಪೆ ವಲಯೋತ್ಸವ

          ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವವು ಗುರುವಾರ ಅಪರಾಹ್ನ ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರೀ ಫ್ರೌಢಶಾಲಾ ಸಭಾಭವನದಲ್ಲಿ ನಡೆಯಿತು. 

                 ವಲಯಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ನೇರೋಳು ಶುಭಹಾರೈಸಿ, ಶ್ರೀಗುರುಗಳ ಭಾವಚಿತ್ರದ ಮುಂದಿರುವಾಗ ಅವರ ದಿವ್ಯಸಾನಿಧ್ಯದ ಭಾವದೊಡನೆ ಶ್ರದ್ಧಾಭಕ್ತಿಗಳಿಂದ ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇಂದಿನ ವಲಯೋತ್ಸವವು ಯಶಸ್ವಿಯಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಮುಂದಿನ ಹಂತದಲ್ಲಿ ಭಾಗವಹಿಸುವ ಅವಕಾಶ ದೊರಕಲು ಶ್ರೀಗುರುಗಳ ಅನುಗ್ರಹ ಸದಾ ಇರಲಿ ಎಂದರು.


          ಬಳಿಕ ವಿದ್ಯಾರ್ಥಿವಾಹಿನಿ ಹಾಗೂ ಯುವ ವಿಭಾಗದವರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ತೀರ್ಪುಗಾರರಾಗಿ ಧರ್ಮತ್ತಡ್ಕ  ಪ್ರೌಢಶಾಲಾ ಅಧ್ಯಾಪಕ ಪಳ್ಳತ್ತಡ್ಕ ವಲಯದ ಸೂರ್ಯನಾರಾಯಣ ಪಳ್ಳತ್ತಡ್ಕ ಸಹಿತ ವಲಯದ ಶಿಷ್ಯಬಂಧುಗಳು ಸಹಕಾರ ನೀಡಿದರು.

           ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿವಿವಿ ಮಂಗಳೂರು ಮಂಡಲ ಅಧ್ಯಕ್ಷ, ನಂತೂರು ಶ್ರೀಭಾರತೀ ಕಾಲೇಜಿನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ನೀರಮೂಲೆ ಭಾಗವಹಿಸಿದ್ದರು.


         ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ, ಪ್ರಮಾಣ ಪತ್ರ ವಿತರಿಸಲಾಯಿತು. ಗುಂಪೆ ವಲಯ ಸೇವಾ ಪ್ರಧಾನ ಶಾಮ ಪ್ರಕಾಶ್ ಪುಣಿಯೂರು ವಿದ್ಯಾರ್ಥಿಗಳಿಗೆ ವಿಶೇಷವಾದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿದರು. ಗುಂಪೆ ವಲಯ ಉಪಾಧ್ಯಕ್ಷ ಲಲಿತಾ ಮಾಣಿ, ಜಯರಾಮ ಭಟ್ ಬಾಳಿಕೆ, ಧರ್ಮತ್ತಡ್ಕ ಎ.ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ನೇರೋಳು, ನರಸಿಂಹರಾಜ ಪಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

            ಆರಂಭದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಆತ್ಮಿಕಾ ಗುಂಪೆ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಸಾಮೂಹಿಕ ಹನುಮತ್ಪಂಚರತ್ನ ಸ್ತೋತ್ರ ಪಠಣ ನಡೆಯಿತು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಸ್ವಾಗತಿಸಿ, ವಂದಿಸಿದರು.  ಗುಂಪೆ ವಲಯ ಯುವ ಪ್ರಧಾನ ಸಾತ್ವಿಕ್ ನೀರಮೂಲೆ ಕಾರ್ಯಕ್ರಮ ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries