ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಮಂಜೇಶ್ವರ ತಾಲೂಕು ಇದರ ಮಾರ್ಗದರ್ಶನದಲ್ಲಿ ಸುಂಕದಕಟ್ಟೆ ವಲಯದ ಸುಂಕದಕಟ್ಟೆ ವಿಭಾಗದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಕಳಿಯೂರು ಸುಂಕದಕಟ್ಟೆ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್‍ಬಾಗ್ ಉದ್ಘಾಟಿಸಿ ಯೋಜನೆಯ ಸೇವಾ ಕಾರ್ಯಗಳ ಬಗ್ಗೆ ಮಾತಾಡಿ, ಶುಭಹಾರೈಸಿದರು. ದಿವ್ಯ ಉಪಸ್ಥಿತಿ ವಹಿಸಿದ್ದ ವರ್ಕಾಡಿ ದೇವಾಲಯದ ಧರ್ಮಗುರು ವಂ.ಸ್ವಾಮಿ.ಬಾಸಿಲ್ ವಾಜ್ ಅವರು ತುಳು ಸಂಸ್ಕøತಿ, ತುಳು ತಾಯಿ ಭಾಷೆ, ತುಳು ಪದ್ಧತಿ ಉಳಿಯಬೇಕು ಎನ್ನುವ ಮಾತಿನೊಂದಿಗೆ ಆಶೀರ್ವಚನ ನೀಡಿದರು.
ಸುಂಕದಕಟ್ಟೆ ಒಕ್ಕೂಟದ ಅಧ್ಯಕ್ಷ ದಿನೇಶ್ ರೆಂಜೇಪಡ್ಪು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಳು ಸಾಹಿತಿ ತುಳು ನಾಟಕ ಕಲಾವಿದ ರವೀಂದ್ರ ಕುಲಾಲ್ ವರ್ಕಾಡಿಯವರು ಹಿಂದಿನ ಕಾಲದಲ್ಲಿ ಆಟಿ ತಿಂಗಳ ಕಷ್ಟದ ದಿನಗಳ ಬಗ್ಗೆ, ಹಿಂದಿನ ಕಾಲದ ಆಹಾರ ಪದ್ಧತಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಮುಖ್ಯ ಶಿಕ್ಷಕಿ ಪುಷ್ಪಾವತಿ, ಸುಂಕದಕಟ್ಟೆ ವಲಯ ಅಧ್ಯಕ್ಷ ಸೋಮಶೇಖರ ಸುವರ್ಣ, ಸುಂಕದಕಟ್ಟೆ ವಲಯ ಭಜನಾ ಪರಿಷತ್ತು ಅಧ್ಯಕ್ಷ ಉಮೇಶ್ ಅರಿಂಗುಳ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ನಾಟಿ ವೈದ್ಯೆ ಎಂಬ ಬಿರುದನ್ನು ಪಡೆದ ವರ್ಕಾಡಿ ಸುಂಕದಕಟ್ಟೆ ಸುಂದರಿ ಅವರನ್ನು ಸಮ್ಮಾನಿಸಲಾಯಿತು. ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಮಂಜೂರಾದ ಸುಜ್ಞಾನಿ ಶಿಷ್ಯವೇತನದ ಮಂಜುರಾತಿ ಪತ್ರವನ್ನು ವೇದಿಕೆಯಲ್ಲಿ ನೀಡಲಾಯಿತು.
ಈ ಸಂದರ್ಭ ಮೈಕ್ರೋ ಬಚ್ಚತ್ ಬಾಂಡ್‍ಗಳನ್ನು ವಿತರಣೆ ಮಾಡಲಾಯಿತು. ಆಟಿ ತಿಂಗಳ ತಿನಿಸುಗಳನ್ನು ಪ್ರದರ್ಶಿಸಲಾಯಿತು. ವಲಯದ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಚೇತನ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಸುಧಾಕರ್ ವಂದಿಸಿದರು. ಸುಂಕದಕಟ್ಟೆ ಒಕ್ಕೂಟದ ಸೇವಾಪ್ರತಿನಿಧಿ ದೀಪಶ್ರೀ, ವಲಯದ ಸೇವಾಪ್ರತಿನಿಧಿಗಳು, ಜ್ಞಾನವಿಕಾಸ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ನವಜೀವನ ಸದಸ್ಯರು ವಲಯದ ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಗಣ್ಯರು ಸಾರ್ವಜನಿಕರು ಉಪಸ್ಥಿತರಿದ್ದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.