HEALTH TIPS

ವಾಘಾದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕನ ಫೋಟೋ: ಪಾಕ್ ರೇಂಜರ್ ಗಳೊಂದಿಗೆ ಪ್ರತಿಭಟನೆ ದಾಖಲಿಸಿದ BSF

     ಚಂಢೀಗಡ: ಅಟಾರಿ ವಾಘಾ ಗಡಿಯ ಪಾಕಿಸ್ತಾನದ ಕಡೆಯಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ದಿವಂಗತ ಸೈಯದ್ ಆಲಿ ಶಾ ಗಿಲಾನಿ ಅವರ ಬೃಹತ್ ಫೋಟೋ ಪ್ರದರ್ಶನ ಹಾಕಿರುವುದಕ್ಕೆ ಪಾಕಿಸ್ತಾನ ರೆಂಜರ್ ಗಳೊಂದಿಗೆ ಗಡಿ ಭದ್ರತಾ ಪಡೆ ಪ್ರತಿಭಟನೆ ದಾಖಲಿಸಿದೆ. ಗಡಿಯಲ್ಲಿ ಅಟಾರಿ ಭಾರತದ ಕಡೆಯಲ್ಲಿದ್ದರೆ, ವಾಘಾ ಪಾಕಿಸ್ತಾನದ ಕಡೆಯಲ್ಲಿದೆ.

     ವಾಘಾದಲ್ಲಿ ಧ್ವಜಾರೋಹಣ ನಡೆಯುವ ಜೆಐಸಿಪಿ ಸ್ಥಳದ ಬಳಿ ಗಿಲಾನಿ ಫೋಟೋ ಹಾಕಲಾಗಿತ್ತು ಎಂದು ಮೂಲಗಳು ಹೇಳಿವೆ.

     ಪಾಕಿಸ್ತಾನಿ ಅಧಿಕಾರಿಗಳು ಇತ್ತೀಚಿಗೆ ಈ ಫೋಟೋವನ್ನು ಹಾಕಿದ್ದು, ಪಾಕಿಸ್ತಾನಿ ರೇಂಜರ್ ಗಳೊಂದಿಗೆ ಬಲವಾದ ಪ್ರತಿಭಟನೆ ದಾಖಲಿಸಿದ್ದೇವೆ. ಇದು ರಿಜಿಮೆಂಟಲ್ ಮತ್ತು ಸಂಭ್ರಮಾಚರಣೆ ಉದ್ದೇಶದ ಸ್ಥಳವಾಗಿರುವುದು, ರಾಜಕೀಯ ಉದ್ದೇಶಕ್ಕೆ ಬಳಸಬಾರದು, ಈ ಫೋಟೋವನ್ನು ತೆರವುಗೊಳಿಸಬೇಕು ಎಂದು ಪಾಕಿಸ್ತಾನಿ ರೇಂಜರ್ ಗಳೊಂದಿಗೆ ಪ್ರತಿಭಟನೆ ದಾಖಲಿಸಿರುವುದಾಗಿ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

     ಇಂತಹ ಮಹತ್ವದ ಸ್ಥಳದಲ್ಲಿ ಪಾಕಿಸ್ತಾನದ ಈ ಕ್ರಮವು ಬೀಟ್-ದಿ-ರಿಟ್ರೀಟ್ ಸಮಾರಂಭಕ್ಕೆ ಬರುವವರ ಮೇಲೆ ಪ್ರಭಾವ ಬೀರಲು ಸಂಚು ಆಗಿದೆ. ಅಂತಾರಾಷ್ಟ್ರೀಯ ಗ್ರಹಿಕೆ ಮತ್ತು ಮತದಾರರ ಭಾವನೆಯನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಎತ್ತಿ ಹಿಡಿದು ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಚೋದನಕಾರಿ ಕೃತ್ಯ ಇದಾಗಿದೆ ಎಂದರು.

    ಕಾಶ್ಮೀರಿ ಪ್ರತ್ಯೇಕತಾವಾದಿ ಹೋರಾಟದಲ್ಲಿ ವಿವಾದಾತ್ಮಕ ನಾಯಕರಾಗಿದ್ದ ಗಿಲಾನಿ ಅವರ ಭಾವಚಿತ್ರವನ್ನು ಗಡಿ ಚೆಕ್ ಪೋಸ್ಟ್‌ನಲ್ಲಿ ಹಾಕುವುದು ಪ್ರತ್ಯೇಕತಾವಾದಿ ಚಳವಳಿಗೆ ಅದರ ಬೆಂಬಲವನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

    ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಾಗಿರುವ ಹಾಗೂ ಮುಂಬರುವ ಜಮ್ಮು- ಕಾಶ್ಮೀರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಪ್ರತಿಕ್ರಿಯೆಯನ್ನು ಸೆಳೆಯಲು ಮತ್ತು ಮತ್ತಷ್ಟು ಉದ್ವಿಗ್ನತೆಯನ್ನು ಉಂಟುಮಾಡಲು ಬಯಸುತ್ತಿದೆ. ಇದಲ್ಲದೆ ತನ್ನ ದೇಶೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.

   ಪಾಕಿಸ್ತಾನದ ಕ್ರಮ ಅಂತರಾಷ್ಟ್ರೀಯ ಗಮನ ಸೆಳೆಯಲು ಮತ್ತು ಕಾಶ್ಮೀರ ಸಮಸ್ಯೆಯ ಮೇಲೆ ಕೇಂದ್ರೀಕರಿಸಲು ಒಂದು ತಂತ್ರವಾಗಿದೆ ಎಂದು ಕೇಂದ್ರ ಏಜೆನ್ಸಿಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries