ಮಂಜೇಶ್ವರ: ವರ್ಕಾಡಿ ಪಾವೂರು ಪೆÇಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣಾಷ್ಟಮಿ ಸಮಿತಿ ಪಾವೂರು ಇದರ ಆಶ್ರಯದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ. 26ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ನಡೆಯಲಿರುವುದು.
ಅಂದು ಬೆಳಿಗ್ಗೆ ವಿವಿಧ ಆಟೋಟ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ಮುಚ್ಚಿಲ್ಮೆ ನೆರವೇರಿಸುವರು. ನಿವೃತ್ತ ಮುಖ್ಯ ಶಿಕ್ಷಕ ಭೋಜ ಮಾಸ್ಟರ್ ಹಾಗೂ ನಾಗೇಶ್ ಬಳ್ಳೂರು ಉಪಸ್ಥಿತರಿರುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋನಪ್ಪ ಶೆಟ್ಟಿ ಉದ್ಘಾಟಿಸುವರು. ಭಜನಾ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆ ವಹಿಸುವರು. ಶ್ರೀಧರ ಶೆಟ್ಟಿ ಪಾವೂರು ಗುತ್ತು, ತ್ಯಾಂಪಣ್ಣ ರೈ, ಮೋಹನ್ ಕೋಡಿ, ಗಣೇಶ್ ಟೈಲರ್, ಡಾ. ಗಣೇಶ್ ಬಜಾಲ್, ಕ್ಷೇತ್ರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಶಿವರಾಮ ಶೆಟ್ಟಿ ಮುಗೇರು ಗುತ್ತು ,ನಾರಾಯಣಶೆಟ್ಟಿ ಬಜಾಲ್,ರವಿ ಮುಡಿಮಾರ್, ಭುಜಂಗ ಕಲ್ಲಾಪು, ರಾಜೇಶ್ ಗುಜರನ್ ಕೊಪ್ಪಳ, ರಾಜೇಶ್ ಕಾನದಕಟ್ಟ ಪಾಲ್ಗೊಳ್ಳುವರು. ಬಹುಮಾನ ವಿತರಣೆ, ಕ್ಷೇತ್ರದ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿರುವುದು.