HEALTH TIPS

ಎಂ-ಪಾಕ್ಸ್‌ ಪತ್ತೆ ಕಿಟ್‌ ತಯಾರಿಕೆಗೆ CDSCO ಅನುಮತಿ: ಸೀಮೆನ್ಸ್ ಹೆಲ್ತಿನಿಯರ್ಸ್

         ವದೆಹಲಿ: ಎಂ-ಪಾಕ್ಸ್‌ ಪತ್ತೆ ಹಚ್ಚುವ ಆರ್‌ಟಿ-ಪಿಸಿಆರ್‌ ಕಿಟ್‌ ತಯಾರಿಕೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯಿಂದ (ಸಿಡಿಎಸ್‌ಸಿಒ) ಅನುಮತಿ ಪಡೆದಿರುವುದಾಗಿ 'ಸೀಮೆನ್ಸ್ ಹೆಲ್ತಿನಿಯರ್ಸ್' ಕಂಪನಿ ತಿಳಿಸಿದೆ.

          ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಿಟ್‌ಗೆ ದೊರೆತಿರುವ ಅನುಮೋದನೆಯು ಎಂ-ಪಾಕ್ಸ್ 'ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಲಿದೆ.

ಕಿಟ್‌ ಅನ್ನು ಕಂಪನಿಯ ವಡೋದರ ಘಟಕದಲ್ಲಿ ತಯಾರಿಸಲಾಗುವುದು. ಈ ಘಟಕವು ವಾರ್ಷಿಕ 10 ಲಕ್ಷ ಕಿಟ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

         ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ (ಐಸಿಎಂಆರ್‌) ಪ್ರಾಯೋಗಿಕವಾಗಿ ಮಾನ್ಯತೆ ಗಿಟ್ಟಿಸಿರುವ ಈ ಕಿಟ್‌ ಬಳಕೆಯಿಂದ 40 ನಿಮಿಷಗಳಲ್ಲೇ ಫಲಿತಾಂಶ ಬರಲಿದೆ. ಇದರಿಂದ ಶೀಘ್ರ ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎಂದು 'ಸೀಮೆನ್ಸ್ ಹೆಲ್ತಿನಿಯರ್ಸ್' ವ್ಯವಸ್ಥಾಪಕ ನಿರ್ದೇಶಕ ಹರಿಹರನ್‌ ಸುಬ್ರಮಣಿಯನ್‌ ಹೇಳಿದ್ದಾರೆ.

            ವೈರಸ್‌ನ ಹೊಸ ರೂಪಾಂತರ ತಳಿ ಪತ್ತೆಯಾದ ಬಳಿಕ ಎಂ-ಪಾಕ್ಸ್‌ ಸೋಂಕನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಘೋಷಿಸಿದೆ

ಎಂ-ಪಾಕ್ಸ್‌ ಅನ್ನು ಈ ಮೊದಲು 'ಮಂಕಿಪಾಕ್ಸ್‌' ಎನ್ನಲಾಗುತ್ತಿತ್ತು. ವರ್ಣಭೇದ ಹಾಗೂ ತಾರತಮ್ಯ ಧೋರಣೆಯ ಆರೋಪಗಳು ಕೇಳಿಬಂದ ಕಾರಣ ಡಬ್ಲ್ಯುಎಚ್‌ಒ 2022ರಲ್ಲಿ 'ಎಂಪಾಕ್ಸ್' ಎಂದು ಮರುನಾಮಕರಣ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries