ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ವಿರುದ್ಧದ ಮಾಸಿಕ ಲಂಚ ಸ್ವೀಕರಿಸಿರುವ ಪ್ರಕರಣದಲ್ಲಿ ಸಿಎಂಆರ್‍ಎಲ್ ಅಧಿಕಾರಿಗಳನ್ನು ಪ್ರಶ್ನಿಸಲು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‍ಎಫ್‍ಐಒ) ಮುಂದಾಗಿದೆ.
ಇದರ ಭಾಗವಾಗಿ ಸಿಎಂಆರ್‍ಎಲ್‍ನ ನಿರ್ದೇಶಕರು ಸೇರಿದಂತೆ ಎಂಟು ಮಂದಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಈ ತಿಂಗಳ 28 ಮತ್ತು 29 ರಂದು ಚೆನ್ನೈನಲ್ಲಿ ಹಾಜರಾಗಲು ಸೂಚಿಸಲಾಗಿದೆ.
ಏತನ್ಮಧ್ಯೆ, ಬಂಧನವನ್ನು ತಡೆಯುವಂತೆ ಕೋರಿ ಸಿಎಂಆರ್‍ಎಲ್ ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ವೀಣಾ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್‍ಗೆ ಸಿಎಮ್‍ಆರ್‍ಎಲ್ ಕಂಪನಿಯು ಸೇವೆ ಸಲ್ಲಿಸದಿದ್ದಕ್ಕಾಗಿ ಪರಿಹಾರವನ್ನು ಪಾವತಿಸಿದೆ ಎಂದು ಆರೋಪಿಸಲಾಗಿದೆ.Éಸ್.ಎಫ್.ಐ.ಒ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಬಂಧಿಸುವ ಅಧಿಕಾರವನ್ನು ಹೊಂದಿರುವ ಸಂಸ್ಥೆ ಎಸ್.ಎಫ್.ಐ.ಒ ಆಗಿರುತ್ತದೆ. ಕಾರ್ಪೊರೇಟ್ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ. ಎಕ್ಸಾ ಲಾಜಿಕ್ ಉದ್ಯೋಗಿಗಳಿಗೂ ಸಮನ್ಸ್ ನೀಡಲಾಗಿದೆ ಎಂಬ ವರದಿಗಳಿವೆ. ಈ ಹಿಂದೆ, ಎಸ್‍ಎಫ್‍ಐಒ ತನಿಖೆಗೆ ತಡೆ ಕೋರಿ ಎಕ್ಸಾಲಾಜಿಕ್ ಕರ್ನಾಟಕ ಹೈಕೋರ್ಟ್‍ಗೆ ಮೊರೆ ಹೋಗಿತ್ತು. ಆದಾಗ್ಯೂ, ಎಸ್‍ಎಫ್‍ಐಒ ಮತ್ತು ಕೇಂದ್ರ ಕಾಪೆರ್Çರೇಟ್ ವ್ಯವಹಾರಗಳ ಸಚಿವಾಲಯದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ.
ತನಿಖೆ ನಿಲ್ಲಿಸುವಂತೆ ಕೋರಿ ವೀಣಾ ಕಂಪನಿ ಅರ್ಜಿ ಸಲ್ಲಿಸಿದೆ. ಕೆ.ಎಸ್.ಐ.ಡಿ.ಸಿ ಸಲ್ಲಿಸಿದ ಇದೇ ರೀತಿಯ ಮನವಿಯನ್ನು ಕೇರಳ ಹೈಕೋರ್ಟ್ ಅನುಮತಿಸಲಿಲ್ಲ.