ವಿಶ್ವದಲ್ಲಿ ಇಂದು ಆಗಸ್ಟ್ ಮೊದಲ ಭಾನುವಾರ ಅಂದರೆ ಸ್ನೇಹದ ವಿಶೇಷ ದಿನವಾಗಿ ಆಚರಿಸುವುದು ರೂಡಿಯಲ್ಲಿದೆ. ಭಾರತದಲ್ಲಿ ಈ ಸ್ನೇಹಿತರ ದಿನವನ್ನು (Happy Friendship Day 2024) ಈ ಬಾರಿ ಆಗಸ್ಟ್ 4 ರಂದು ಮತ್ತು ಎಲ್ಲಾ ಮಕ್ಕಳು ಮತ್ತು ಹಿರಿಯರು ಈ ದಿನದಂದು ತಮ್ಮ ಸ್ನೇಹವನ್ನು ಆಚರಿಸುತ್ತಾರೆ. ಗೆಳೆಯರು ಒಬ್ಬರಿಗೊಬ್ಬರು ಶುಭ ಕೋರಲು ಕೆಲವು ವಿಶೇಷ ಸಂದೇಶಗಳು, ಸ್ಟಿಕ್ಕರ್ ಮತ್ತು ಇಂಟ್ರೆಸ್ಟಿಂಗ್ ಬಗ್ಗೆ ಈ ಕೆಳಗೆ ತಿಳಿಸಲಿದ್ದೇನೆ.
ಇಂದಿನ ಡಿಜಿಟಲ್ ಯುಗದಲ್ಲಿ ದೂರದಲ್ಲಿ ವಾಸಿಸುವ ಅಥವಾ ಒಟ್ಟಿಗೆ ವಾಸಿಸುವ ಸ್ನೇಹಿತರೊಂದಿಗೂ ಸಹ ಸೋಶಿಯಲ್ ಮೀಡಿಯಾದ (Social Media) ಮೂಲಕವೆ ತಮ್ಮ ಸ್ನೇಹದ ಮಹತ್ವ ಕೇವಲ ಸಂದೇಶ, ವಿಡಿಯೋ ಮತ್ತು ಸ್ಟಿಕರ್ ಶುಭಾಶಯಗಳಲ್ಲಿ ತೋರುವ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಯಾಕೆಂದರೆ ಸೋಶಿಯಲ್ ಮೀಡಿಯಾ ಜನರ ಸಂದೇಶಗಳನ್ನು ಕಳುಹಿಸುವ ಮತ್ತು ಸ್ಟೇಟಸ್ ಹಂಚಿಕೊಳ್ಳುವ ಜನಪ್ರಿಯ ವೇದಿಕೆಗಳಾಗಿವೆ.
Happy Friendship Day 2024 ವಾಟ್ಸಾಪ್ ಸ್ಟಿಕರ್ ಮತ್ತು ಸ್ಟೇಟಸ್ ಡೌನ್‌ಲೋಡ್ ಮಾಡುವುದು ಹೇಗೆ?
-ಫ್ರೆಂಡ್‌ಶಿಪ್ ಡೇ ಸ್ಪಿಕ್ಕರ್‌ಗಳನ್ನು ಸ್ಥಾಪಿಸಲು ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅನ್ನು ತೆರೆಯಬೇಕು .
-ಇದರ ನಂತರ ಟೈಪಿಂಗ್ ಸ್ಟೇಸ್ ಮತ್ತು ಎಮೋಜಿ ಐಕಾನ್ ಬಳಿ ಇರುವ ಸ್ಪಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
-ಈಗ ನಿಮ್ಮ ಫೋನ್‌ನಲ್ಲಿರುವ ಸ್ಟಿಕ್ಕರ್ ಪ್ಯಾಕ್‌ಗಳ ಮೂಲಕ ಸ್ಟಾಲ್ ಮಾಡಿ ಮತ್ತು ನೀವು ಯಾವುದೇ ಫ್ರೆಂಡ್‌ಶಿಪ್ ಸ್ಟಿಕ್ಕರ್ ಪ್ಯಾಕ್ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೋಡಿ.
-ನಿಮ್ಮ ಫೋನ್‌ನಲ್ಲಿ ಫ್ರೆಂಡ್‌ಶಿಪ್ ಸ್ಟಿಕ್ಕರ್ ಪ್ಯಾಕ್ ಇಲ್ಲದಿದ್ದರೆ + ಐಕಾನ್ ಮೇಲೆ ಟ್ಯಾಪ್ ಮಾಡಿ.
-ಇದರ ನಂತರ ನಿಮ್ಮನ್ನು ಆಪ್ ಸ್ಟೋರ್‌ಗೆ ಮರುನಿರ್ದೇಶಿಸಲಾಗುತ್ತದೆ ಮತ್ತು ಅಲ್ಲಿಂದ ಥರ್ಡ್ ಪಾರ್ಟಿ WhatsApp ಫ್ರೆಂಡ್‌ಶಿಪ್ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
-ಸರ್ಚ್ ಬಾರ್‌ನಲ್ಲಿ ಪ್ಲೇ ಸ್ಟೋರ್‌ನಲ್ಲಿ ಫ್ರೆಂಡ್‌ಶಿಪ್ ಸ್ಟಿಕ್ಕರ್ ಪ್ಯಾಕ್ ಎಂದು ಬರೆಯಿರಿ ಇದರ ನಂತರ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ.
-ನಿಮ್ಮ ಆಯ್ಕೆಯ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು WhatsApp ಗೆ ಸೇರಿಸಿ.
-ಇದರ ನಂತರ ನೀವು WhatsApp ಗೆ ಹೋಗುವ ಮೂಲಕ ನಿಮ್ಮ ಸ್ನೇಹಿತರಿಗೆ ಫ್ರೆಂಡ್‌ಶಿಪ್ ಡೇ ಸ್ಟಿಕ್ಸರ್‌ಗಳನ್ನು ಕಳುಹಿಸಬಹುದು.
Happy Friendship Day 2024 ಶುಭಾಶಯಗಳ ಸಲಹೆ
ಒಬ್ಬ ಸ್ನೇಹಿತ ನಿಮ್ಮ ಪ್ರತಿಬಿಂಬ ಅಗಿರುತ್ತಾನೆ ನೀವು ಎಲ್ಲಿದ್ದೀರಿ, ಹೇಗಿದ್ದಿರ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಇನ್ನೂ ನಿಧಾನವಾಗಿ ಬೆಳೆಯಲು ನಿಮಗೆ ಅವಕಾಶ ನೀಡುತ್ತದೆ – ವಿಲಿಯಂ ಶೇಕ್ಸ್ಪಿಯರ್
ಒಂದು ಉತ್ತಮ ಪುಸ್ತಕ ನೂರು ಒಳ್ಳೆಯ ಗೆಳೆಯರಿಗೆ ಸಮಾನ ಆದರೆ ಒಬ್ಬ ಒಳ್ಳೆಯ ಗೆಳೆಯ ಗ್ರಂಥಾಲಯಕ್ಕೆ ಸಮಾನ – ಡಾ.ಎಪಿಜೆ ಅಬ್ದುಲ್ ಕಲಾಂ
ಸ್ನೇಹವು ವಿವರಿಸಲು ವಿಶ್ವದ ಅತ್ಯಂತ ಕಷ್ಟಕರವಾದ ವಿಷಯವಾಗಿದೆ. ಇದು ನೀವು ಶಾಲೆಯಲ್ಲಿ ಕಲಿಯುವ ವಿಷಯವಲ್ಲ. ಆದರೆ ನೀವು ಸ್ನೇಹದ ಅರ್ಥವನ್ನು ಕಲಿಯದಿದ್ದರೆ ನೀವು ನಿಜವಾಗಿಯೂ ಏನನ್ನೂ ಕಲಿತಿಲ್ಲ – ಮುಹಮ್ಮದ್ ಅಲಿ
ಒಬ್ಬ ಒಳ್ಳೆ ಸ್ನೇಹಿತ ಎಂದರೆ ನಿಮ್ಮನ್ನು ತಿಳಿದಿರುವವನು ಮತ್ತು ನಿನ್ನನ್ನು ಪ್ರೀತಿಸುವವನು – ಎಲ್ಬರ್ಟ್ ಹಬಾರ್ಡ್
ಮಾತುಗಳು ಗಾಳಿಯಂತೆ ಸುಲಭ ಆದರೆ ನಿಷ್ಠಾವಂತ ಸ್ನೇಹಿತರನ್ನು ಕಂಡುಹಿಡಿಯುವುದು ಕಷ್ಟ – ವಿಲಿಯಂ ಷೇಕ್ಸ್ಪಿಯರ್
ಪ್ರಪಂಚದ ಉಳಿದ ಭಾಗಗಳು ಹೊರನಡೆದಾಗ ಒಳಗೆ ನಡೆಯುವವನು ನಿಜವಾದ ಸ್ನೇಹಿತ – ವಾಲ್ಟರ್ ವಿಂಚೆಲ್