ಭೋಪಾಲ್: ದೇಶದ ವಿವಿಧ ಹವಾಮಾನ ವಲಯಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ಹೊಸ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಶನಿವಾರ ಹೆಳಿದ್ದಾರೆ.

ಧಾನ್ಯಗಳಲ್ಲಿ 23 ವಿಧದ ಬೀಜಗಳು ಸೇರಿವೆ. ಭತ್ತದಲ್ಲಿ 9, ಗೋಧಿಯಲ್ಲಿ 2, ಮೆಕ್ಕೆ ಜೋಳದಲ್ಲಿ 6, ಸಿರಿಧಾನ್ಯ, ಬಿಳಿಜೋಳ, ರಾಗಿ, ಸಾಂಬಾ, ಬಾರ್ಲೆಯಲ್ಲಿ ತಲಾ ಒಂದು, ಎಣ್ಣೆಕಾಳುಗಳಲ್ಲಿ ಏಳು ವಿವಿಧ ಬಗೆಯ ಬೀಜಗಳು, ಮೇವಿನ ಬೆಳೆ ಹಾಗೂ ಕಬ್ಬಿನಲ್ಲಿ ಏಳು, ಹತ್ತಿಯಲ್ಲಿ ಐದು ವಿಧದ ತಳಿಗಳು ಒಳಗೊಂಡ ಪ್ರಮುಖವು. ತೋಟಗಾರಿಕಾ ಇಲಾಖೆಯಲ್ಲಿ 40 ತಳಿಗಳು ಸೇರಿವೆ. ಇವುಗಳೊಂದಿಗೆ ಶೇ 20ರಷ್ಟು ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ನೀಡುವ ಭತ್ತದ ತಳಿಯನ್ನೂ ಐಸಿಎಆರ್ ಅಭಿವೃದ್ಧಿಪಡಿಸಿದೆ ಎಂದು ಅವರು ತಿಳಿಸಿದ್ಧಾರೆ.
'ಕೀಟ ಭಾದೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಂತ್ರಜ್ಞಾನಗಳು ಪ್ರಯೋಗಾಲಯದಿಂದ ಕೃಷಿ ಭೂಮಿಗೆ ನೇರವಾಗಿ ರೈತರಿಗೆ ತಲುಪುವಂತೆ ಯೋಜನೆ ರೂಪಿಸಲಾಗುತ್ತಿದೆ. ಯುಪಿಎ ಅವಧಿಯಲ್ಲಿ ಬಜೆಟ್‌ನಲ್ಲಿ ಕೃಷಿಗೆ ₹27 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಇದು ₹1.52 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಗೊಬ್ಬರ ಸಹಿತ ಸಬ್ಸಿಡಿ ಮೊತ್ತವೇ ₹1.95 ಲಕ್ಷ ಕೋಟಿ ನೀಡಲಾಗುತ್ತಿದೆ. ಈವರ್ಷ ಸಬ್ಸಿಡಿಗೆ ₹1.70 ಲಕ್ಷ ಕೋಟಿ ಮೀಸಲಿಡಲಾಗಿದೆ. ಬೇಡಿಕೆ ಹೆಚ್ಚಾದರೆ ಮೊತ್ತವನ್ನೂ ಹೆಚ್ಚಿಸಲಾಗುವುದು' ಎಂದು ಚವ್ಹಾಣ್ ಹೇಳಿದ್ದಾರೆ.
'ಅಂತರರಾಷ್ಟ್ರೀಯ ಮಟ್ಟದಲ್ಲಿನ ಕೆಲವೊಂದು ಬೆಳವಣಿಗೆಗಳಿಂದ ಭಾರತಕ್ಕೆ ಹಡಗು ಮೂಲಕ ಬರಬೇಕಾದ ಗೊಬ್ಬರ ಮಾರ್ಗ ಬದಲಿಸಿ ಬೇರೆ ದಾರಿಯಲ್ಲಿ ಬರುತ್ತಿದೆ. ಹೀಗಾಗಿ ಈ ಹೊರೆಯು ರೈತರ ಮೇಲಾಗದಂತೆ ತಡೆಯಲು ₹2,625 ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ.