ಮುಂಬೈ: ಭಾನುವಾರ ನಡೆಯಲಿರುವ 'ಮುಂಬೈ ಹಾಫ್ ಮ್ಯಾರಥಾನ್'ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಚಾಲನೆ ನೀಡಲಿದ್ದಾರೆ. ಮ್ಯಾರಾಥಾನ್‌ನಲ್ಲಿ 6,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಸುಮಾರು 20,000 ಮಂದಿ ಭಾಗವಹಿಸಲಿದ್ದಾರೆ.
ಮುಂಬೈ: ಭಾನುವಾರ ನಡೆಯಲಿರುವ 'ಮುಂಬೈ ಹಾಫ್ ಮ್ಯಾರಥಾನ್'ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಚಾಲನೆ ನೀಡಲಿದ್ದಾರೆ. ಮ್ಯಾರಾಥಾನ್‌ನಲ್ಲಿ 6,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಸುಮಾರು 20,000 ಮಂದಿ ಭಾಗವಹಿಸಲಿದ್ದಾರೆ.
ನಗರದ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
10ಕೆ ಸ್ಪರ್ಧೆಯಲ್ಲಿ 8,000ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ. 21ಕೆ ಹಾಫ್ ಮ್ಯಾರಥಾನ್‌ನಲ್ಲಿ ಮಹಾರಾಷ್ಟ್ರ ಮತ್ತು ಇತರ ಕಡೆಗಳಿಂದ ಆಗಮಿಸುವ ಖ್ಯಾತ ಕ್ರೀಡಾಪಟುಗಳು ಸೇರಿ 4,000 ಓಟಗಾರರು ಭಾಗವಹಿಸಲಿದ್ದಾರೆ.
ಭಾರತೀಯ ನೌಕಾಪಡೆಯಿಂದ 1,500 ಓಟಗಾರರು ಭಾಗವಹಿಸಲಿದ್ದಾರೆ. ಈ ವರ್ಷ ಓಟದಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆಯಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
'ನಾವು ಓಟವನ್ನು ಫಿಟ್‌ನೆಸ್ ಮಾರ್ಗವಾಗಿ ಉತ್ತೇಜಿಸುವ ಗುರಿಯನ್ನು ಹೊಂದಿದ್ದೇವೆ. ಈ ವರ್ಷ ಮುಂಬೈ ಹಾಫ್-ಮ್ಯಾರಥಾನ್ ನೋಂದಣಿಯಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಹರ್ಷದಾಯಕವಾಗಿದೆ' ಎಂದು ತೆಂಡೂಲ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.