ನವದೆಹಲಿ: ವಿದ್ಯಾರ್ಥಿಗಳ 9, 10 ಮತ್ತು 11ನೇ ತರಗತಿಗಳಲ್ಲಿನ ಸಾಧನೆಗಳನ್ನು ಅವರ 12ನೇ ತರಗತಿಯ ಬೋರ್ಡ್ ಫಲಿತಾಂಶಗಳಿಗೆ ಕೊಡುಗೆ ನೀಡುವಂತಹ ಹೊಸ ಬದಲಾವಣೆ ತರಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCIRT) ಹೊಸ ಪ್ರಸ್ತಾಪವನ್ನು ಇಟ್ಟಿದೆ.

ಈ ಸಲಹೆಯನ್ನು ಜುಲೈ ತಿಂಗಳಲ್ಲಿ ಬಿಡುಗಡೆಯಾದ ಶಿಕ್ಷಣ ಮಂಡಳಿಗಳಾದ್ಯಂತ ಸಮಾನತೆಯನ್ನು ಸ್ಥಾಪಿಸುವುದು ಎಂಬ ಶೀರ್ಷಿಕೆಯ ವರದಿಯಲ್ಲಿ ನೀಡಲಾಗಿದೆ. ಇದು ಶೈಕ್ಷಣಿಕ ವರ್ಷವನ್ನು ಎರಡು ವಿಭಾಗವಾಗಿ ವಿಂಗಡಿಸುತ್ತದೆ. 12 ನೇ ತರಗತಿ ಬೋರ್ಡ್ ಫಲಿತಾಂಶಕ್ಕೆ 9, 10 ಮತ್ತು 11ನೇ ತರಗತಿಗಳ ಅಂಕಗಳನ್ನು ಸೇರಿಸಲು ವರದಿ ಶಿಫಾರಸು ಮಾಡಿದೆ.
ವರದಿಯಲ್ಲಿ, 9ನೇ ತರಗತಿಯಿಂದ 12ನೇ ತರಗತಿಯವರೆಗೆ ರಚನಾತ್ಮಕ ಮತ್ತು ಸಂಕಲನಾತ್ಮಕ ಅಂಕಗಳ ತೂಕವನ್ನು ಹಂತಹಂತವಾಗಿ ಸರಿಹೊಂದಿಸಲಾಗುತ್ತದೆ. ಕಲಿಯುವವರು ಗ್ರೇಡ್‌ಗಳಲ್ಲಿ ಮುನ್ನಡೆಯುತ್ತಿದ್ದಂತೆ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಒತ್ತು ನೀಡಲಾಗುತ್ತದೆ.
ನಿರ್ದಿಷ್ಟವಾಗಿ 9ನೇ ತರಗತಿಯಲ್ಲಿ 7% ರಚನಾತ್ಮಕ ಮತ್ತು 30% ಸಂಕಲನಾತ್ಮಕ, 10 ನೇ ತರಗತಿಯಲ್ಲಿ 50% ರಚನಾತ್ಮಕ ಮತ್ತು 50% ಸಂಕಲನಾತ್ಮಕ, 11ನೇ ತರಗತಿಯಿಂದ 40% ರಚನಾತ್ಮಕ ಮತ್ತು 60% ಸಂಕಲನಾತ್ಮಕ, ಮತ್ತು 12ನೇ ತರಗತಿಯಿಂದ 30% ರಚನಾತ್ಮಕ ಮತ್ತು 70% ಸಂಕಲನಾತ್ಮಕ ವಿಭಜನೆ ಮಾಡಲಾಗುತ್ತದೆ.
ಇದರ ಪರಿಣಾಮವಾಗಿ ದ್ವಿತೀಯ ಹಂತದ ಕೊನೆಯಲ್ಲಿ ನೀಡುವ ಅಂಕಗಳಲ್ಲಿ 9ನೇ ತರಗತಿಯ 15%, 10ನೇ ತರಗತಿಯ 20%, 11ನೇ ತರಗತಿಯ 25% ಮತ್ತು 12ನೇ ತರಗತಿಯ 40% ಅಂಕಗಳನ್ನಯ ಸೇರಿಸಬೇಕು ಎಂದು ವರದಿ ಉಲ್ಲೇಖಿಸಿದೆ. ಇದರಿಂದ ವರ್ಷಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಅವರ ಅಂತಿಮ ಅಂಕಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದಿದೆ.