ಪ್ಯಾರಿಸ್ 2024ರ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಐದನೇ ದಿನವಾದ ಇಂದು ಹಲವು ಕ್ರೀಡಾಪಟುಗಳು ಮುಂದಿನ ಹಂತಕ್ಕೆ ತಲುಪಿದ್ದಾರೆ.
ಆರ್ಚರಿಯಲ್ಲಿ ದೀಪಿಕಾ ಕುಮಾರಿ ಟೀಮ್ ಈವೆಂಟ್‌ನ 16ರ ವೈಯಕ್ತಿಕ ಸುತ್ತಿಗೆ ಪ್ರವೇಶಿಸಿದರು. ಮಾಜಿ ವಿಶ್ವದ ನಂ. 1 ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸತತ ಮಹಿಳಾ ವೈಯಕ್ತಿಕ ಪಂದ್ಯಗಳನ್ನು ಗೆದ್ದು ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಪಡೆದರು. ನಾಲ್ಕು ಬಾರಿಯ ಒಲಿಂಪಿಯನ್ ದೀಪಿಕಾ ಇಂದು ಲೆಸ್ ಇನ್ವಾಲಿಡ್ಸ್‌ನಲ್ಲಿ ನಡೆದ 32ರ ಸುತ್ತಿನಲ್ಲಿ ಡಚ್ ಬಿಲ್ಲುಗಾರ್ತಿ ಕ್ವಿಂಟಿ ರೋಫೆನ್ ಅವರನ್ನು 6-2 ರಿಂದ ಸೋಲಿಸಿದರು.
ಬಾಕ್ಸಿಂಗ್: ಲೊವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ
ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಬಲವಾಗಿ ಪ್ರಾರಂಭಿಸಿದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ 16ನೇ ಸುತ್ತಿನ ಪಂದ್ಯದಲ್ಲಿ ಅವರು ನಾರ್ವೆಯ ಸುನ್ನಿವಾ ಹಾಫ್‌ಸ್ಟೆಡ್ ಅವರನ್ನು 5:0 ಅಂಕಗಳಿಂದ ಸೋಲಿಸಿದರು.
ಟೇಬಲ್ ಟೆನಿಸ್: ಶ್ರೀಜಾ ಅಕುಲಾ ಪ್ರೀ ಕ್ವಾರ್ಟರ್ ಫೈನಲ್ ಗೆ
ಪ್ಯಾರಿಸ್ 2024ರ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯದ ಮಹಿಳೆಯರ ಸಿಂಗಲ್ಸ್ ಸುತ್ತಿನಲ್ಲಿ ಸಿಂಗಾಪುರದ ಪ್ಯಾಡ್ಲರ್ ಝೆಂಗ್ ಜಿಯಾನ್ ಅವರ ಸವಾಲನ್ನು ಭಾರತದ ಶ್ರೀಜಾ ಅಕುಲಾ ಜಯಿಸಿದ್ದಾರೆ. ನಂತರದ ದಿನದಾಟದಲ್ಲಿ ಅವರು ದೇಶವಾಸಿ ಮನಿಕಾ ಬಾತ್ರಾ ಅವರೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ದಕ್ಷಿಣ ಪ್ಯಾರಿಸ್ ಅರೆನಾದಲ್ಲಿ ಇಂದು 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರ್ತಿ ಅಕುಲಾ 9-11, 12-10, 11-4, 11-5, 10-12, 12-10 ಸೆಟ್‌ಗಳಿಂದ ಗೆದ್ದರು.
ಬ್ಯಾಡ್ಮಿಂಟನ್: ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ 16ರ ಸುತ್ತಿಗೆ ಪ್ರವೇಶಿಸಿದ ಲಕ್ಷ್ಯ ಸೇನ್
ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅವರು ಪ್ಯಾರಿಸ್ 2024ರ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಗ್ರೂಪ್ ಎಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು 21-18, 21-12 ರಿಂದ ಸೋಲಿಸಿದರು. ಸಮ್ಮರ್ ಗೇಮ್ಸ್‌ನಲ್ಲಿ ಶ್ರೇಯಾಂಕ ರಹಿತರಾದ ಸೇನ್, ಬುಧವಾರ ಲಾ ಚಾಪೆಲ್ಲೆ ಅರೆನಾದಲ್ಲಿ ಮೂರನೇ ಶ್ರೇಯಾಂಕದ ಕ್ರಿಸ್ಟಿ ಅವರನ್ನು 50 ನಿಮಿಷಗಳಲ್ಲಿ ಸೋಲಿಸುವ ಮೂಲಕ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು.