HEALTH TIPS

ಸ್ವಾತಂತ್ರ್ಯೋತ್ಸವ: PM ಉಲ್ಲೇಖಿಸಿದ ಸಾಧಕರಿಗೆ ರಾಜಭವನದ '@ ಹೋಮ್'ಗೆ ಆಹ್ವಾನ-MHA

 ವದಹೆಲಿ: ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆ. 15ರ ಸಂಜೆ ರಾಜಭವನದಲ್ಲಿ ನಡೆಯುವ 'ಅಟ್ ಹೋಮ್‌' ಕಾರ್ಯಕ್ರಮದಲ್ಲಿ ಯಾರೆಲ್ಲರನ್ನು ಆಹ್ವಾನಿಸಬೇಕು ಎಂಬ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮೂಲಕ ತಿಳಿಸಿದೆ.

ಗಡಿಯಲ್ಲಿ ಪ್ರಾಣತೆತ್ತ ಯೋಧರ ಮಕ್ಕಳು, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಹಾಗೂ ಪದಕ ವಿಜೇತರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಂಡವರು ಹಾಗೂ ಪ್ರಸಿದ್ಧ ವ್ಯಕ್ತಿಗಳು, ರೇಡಿಯೊದ 'ಮನ್‌ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ ಹೆಸರುಗಳ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ಅಂತಿಮಗೊಳಿಸಿದೆ.

ಪ್ರತಿ ಸ್ವಾತಂತ್ರ್ಯೋತ್ಸವದ ದಿನ ಸಂಜೆ ರಾಜಭವನದಲ್ಲಿ ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ ಆಯೋಜಿಸುವ ಚಹಾ ಕೂಟ 'ಅಟ್‌ ಹೋಂ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಮಾಜದ ಪ್ರಮುಖರನ್ನು ಆಹ್ವಾನಿಸುವುದು ವಾಡಿಕೆ. ಆದರೆ ಈ ಬಾರಿ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು, ಗ್ರಾಮದ ಮುಖ್ಯಸ್ಥರಾಗಿರುವ ಮಹಿಳೆಯರು ಆಹ್ವಾನಿತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಬಾರಿಯ ಆಹ್ವಾನಿತರ ಪಟ್ಟಿಯಲ್ಲಿ ಅಂಗವಿಕಲರು, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಪರಿಸರ ಹೋರಾಟಗಾರರು, ಪದ್ಮ ಪ್ರಶಸ್ತಿ ಪುರಸ್ಕೃತರು, ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುವವರು, ಶೌರ್ಯ, ಸಾಹಸ ಮೆರೆದ ಮಕ್ಕಳು, ಮಹಿಳಾ ಸರಪಂಚ್‌ಗಳು, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಉತ್ತಮ ಸಂಶೋಧಕರು, ವಿಜ್ಞಾನಿಗಳನ್ನು ಆಹ್ವಾನಿಸುವಂತೆ ಸೂಚಿಸಲಾಗಿದೆ.

'ಇಂಥ ಸುಮಾರು 25ರಿಂದ 50 ಜನರಿಗೆ ಆಸನಗಳನ್ನು ಮೀಸಲಿಡಬೇಕು. ಕಾರ್ಯಕ್ರಮದಲ್ಲಿ ಹಾಜರಾಗಲು ಅವಕಾಶವಾಗುವಂತೆ ಇವರ ಹೆಸರುಗಳನ್ನು ಮೊದಲೇ ಪ್ರಕಟಿಸಬೇಕು. ಈ ಕಾರ್ಯಕ್ರಮ ಆ. 15ರ ಸಂಜೆ 6ರ ನಂತರ ಆರಂಭಿಸಬೇಕು' ಎಂದೆನ್ನಲಾಗಿದೆ.

'ಪ್ರತಿ ವರ್ಷ ಹೊಸಬರಿಗೆ ಅವಕಾಶ ಕಲ್ಪಿಸಬೇಕು. ಒಂದು ಬಾರಿ 'ಅಟ್ ಹೋಂ' ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನೇ ಮರಳಿ ಕರೆಯುವಂತಿಲ್ಲ. ಆ ಮೂಲಕ ಸಮಾಜದ ಪ್ರತಿಯೊಬ್ಬ ವಿಶೇಷ ವ್ಯಕ್ತಿಗೂ ಈ ಅವಕಾಶ ಸಿಗುವಂತೆ ಯೋಜನೆ ರೂಪಿಸಬೇಕು. ಜೀವನದಲ್ಲಿ ಒಮ್ಮೆ ಸಿಗುವ ಅವಕಾಶವೆಂಬಂತೆ ಆಹ್ವಾನಿತರು ಸದಾ ತಮ್ಮೊಂದಿಗೆ ಇಟ್ಟುಕೊಳ್ಳುವಂತ ರೀತಿಯ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಬೇಕು' ಎಂದು ಗೃಹ ಇಲಾಖೆ ಮಾರ್ಗಸೂಚಿಯನ್ನು ಕಳುಹಿಸಿದೆ.

'ರಾಜಭವನದ 'ಅಟ್ ಹೋಮ್' ಕಾರ್ಯಕ್ರಮದಲ್ಲಿ ವಾದ್ಯ ತಂಡವು ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವ ಬದಲು, ದೇಶಪ್ರೇಮ ಕುರಿತಾದ ಗೀತೆಗಳನ್ನು ನುಡಿಸಬೇಕು. ಶಾಲಾ ಬ್ಯಾಂಡ್‌ಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ತಂಡ 'ಅಟ್ ಹೋಮ್‌'ನಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು' ಎಂದೂ ಗೃಹ ಇಲಾಖೆ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries