ಯುಪಿಐ ಅಪ್ಲಿಕೇಶನ್‍ಗಳ ಬಳಕೆದಾರರು ಇನ್ನು ಎಟಿಎಂ ಕಾರ್ಡ್ ಇಲ್ಲದೆಯೇ ನಗದು ಠೇವಣಿ ಯಂತ್ರಗಳ (ಸಿಡಿಎಂ) ಮೂಲಕ ಹಣವನ್ನು ಠೇವಣಿ ಮಾಡಬಹುದು.
ಇದಕ್ಕಾಗಿ, ಹೊಸ ಯುಪಿಐ ಇಂಟರ್ ಆಪರೇಬಲ್ ಕ್ಯಾಶ್ ಡೆಪಾಸಿಟ್ (ಯುಪಿಐ-ಐಸಿಡಿ) ವೈಶಿಷ್ಟ್ಯವನ್ನು ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ ಅವರು ಚಾಲನೆ ನೀಡಿರುವರು. ಮುಂಬೈನಲ್ಲಿ ಇಂದು ನಡೆದ ಈ ವರ್ಷದ ಗ್ಲೋಬಲ್ ಫಿನ್‍ಟೆಕ್ ಫೆಸ್ಟ್‍ನಲ್ಲಿ ಈ ಘೋಷÀಣೆ ಮಾಡಲಾಗಿದೆ.
ಯುಪಿಐ-ಐಸಿಡಿ ಸಹಾಯದಿಂದ, ಗ್ರಾಹಕರು ಕಾರ್ಡ್ ಇಲ್ಲದೆ ಸಿಡಿಎಂ ಮೂಲಕ ಹಣವನ್ನು ಠೇವಣಿ ಮಾಡಬಹುದು. 2023 ರಲ್ಲಿಯೇ, ಕಾರ್ಡ್ ಇಲ್ಲದೆ ಯುಪಿಐ ಬಳಸಿ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಲಾಯಿತು.
ಗ್ರಾಹಕರ ಮೊಬೈಲ್ ಸಂಖ್ಯೆ, ಯುಪಿಎ ಐಡಿ ಮತ್ತು ಖಾತೆಗಳ ಐ.ಎಫ್.ಎಸ್. ಕೋಡ್‍ಗೆ ಲಿಂಕ್ ಮಾಡಲಾದ ಯುಪಿಐ ಖಾತೆಯನ್ನು ಬಳಸಿಕೊಂಡು ಯುಪಿಐ-ಐಸಿಡಿ ಕಾರ್ಯನಿರ್ವಹಿಸುತ್ತದೆ. ಈ ರೀತಿಯಲ್ಲಿ ನೀವು ನಿಮ್ಮ ಸ್ವಂತ ಬ್ಯಾಂಕ್ ಖಾತೆಗೆ ಅಥವಾ ಇತರ ಜನರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಬಹುದು.
ಇದಲ್ಲದೆ, ಎಟಿಎಂಗಳು ಡಿಜಿಟಲ್ ಬ್ಯಾಂಕಿಂಗ್ ಘಟಕಗಳಾಗುತ್ತಿದ್ದು, ಗ್ರಾಹಕರು ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್‍ಗಳಿಗೆ ಅರ್ಜಿ ಸಲ್ಲಿಸುವುದು, ಎಫ್‍ಡಿ ತೆರೆಯುವುದು ಮತ್ತು ಸುರಕ್ಷಿತ ಠೇವಣಿ ಲಾಕರ್‍ಗಳಿಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವಿಧ ಸೇವೆಗಳನ್ನು ಎಟಿಎಂಗಳ ಮೂಲಕ ಪಡೆಯಬಹುದು ಎಂದು ಆರ್‍ಬಿಐ ಹೇಳಿದೆ.