ವಯನಾಡ್: 'ವಯನಾಡ್ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ ದೇಹದ ಭಾಗಗಳನ್ನು ಸೋಮವಾರ ಶೋಧ ಕಾರ್ಯದ ವೇಳೆ ಹೊರತೆಗೆಯಲಾಗಿದೆ. ಒಟ್ಟು ಆರು ದೇಹಗಳ ಭಾಗಗಳನ್ನು ಹೊರತೆಯಲಾಗಿದ್ದು, ಇವುಗಳಲ್ಲಿ ಐದು ಮನುಷ್ಯನ ದೇಹಗಳ ಭಾಗಗಳಾಗಿವೆ' ಎಂದು ಅಧಿಕಾರಿಗಳು ತಿಳಿಸಿದರು.

'ಶೋಧಕಾರ್ಯದ ವೇಳೆ ದೊರೆತ ದೇಹದ ಭಾಗಗಳನ್ನು ಸುಲ್ತಾನ್ ಬತೇರಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 231 ಮೃತದೇಹಗಳು ಹಾಗೂ 217 ದೇಹದ ಭಾಗಗಳು ದೊರೆತಿವೆ. 231ರಲ್ಲಿ 176 ಮೃತದೇಹಗಳ ಗುರುತು ಪತ್ತೆಯಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ' ಎಂದರು.
'ಸರ್ಕಾರದ ನಿರ್ದೇಶನದಂತೆ ಗುರುತು ಪತ್ತೆಯಾಗದ 55 ಮೃತದೇಹಗಳು ಹಾಗೂ 203 ದೇಹದ ಭಾಗಗಳ ಅಂತ್ಯಸಂಸ್ಕಾರ ಮಾಡಲಾಗಿದೆ. 30ಕ್ಕೂ ಹೆಚ್ಚು ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತು ಪತ್ತೆ ಮಾಡಲಾಗಿತ್ತು' ಎಂದರು. ನೂರಾರು ಸಂತ್ರಸ್ತರು ಆಶ್ರಯ ಪಡೆದಿದ್ದ ಮೇಪ್ಪಾಡಿ ಪ್ರೌಢ ಶಾಲೆಯ ತರಗತಿಗಳು ಮಂಗಳವಾರದಿಂದ ಆರಂಭಗೊಳ್ಳಲಿದೆ.