ತ್ರಿಶೂರ್: ಭೂಕುಸಿತದಲ್ಲಿ ನೆಲೆ ಕಳೆದುಕೊಂಡವರ ಪೈಕಿ 150 ಕುಟುಂಬಗಳಿಗೆ ಎನ್‌ಎಸ್‌ಎಸ್ ಸ್ವಯಂಸೇವಕರು ಮನೆಯನ್ನು ನಿರ್ಮಿಸಿಕೊಡಲಿದ್ದಾರೆ ಎಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಶುಕ್ರವಾರ ಹೇಳಿದ್ದಾರೆ.
ತ್ರಿಶೂರ್: ಭೂಕುಸಿತದಲ್ಲಿ ನೆಲೆ ಕಳೆದುಕೊಂಡವರ ಪೈಕಿ 150 ಕುಟುಂಬಗಳಿಗೆ ಎನ್‌ಎಸ್‌ಎಸ್ ಸ್ವಯಂಸೇವಕರು ಮನೆಯನ್ನು ನಿರ್ಮಿಸಿಕೊಡಲಿದ್ದಾರೆ ಎಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಶುಕ್ರವಾರ ಹೇಳಿದ್ದಾರೆ.
ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಹಿಂದೆ ಕೂಡ ಎನ್‌ಎಸ್‌ಎಸ್ ಸ್ವಯಂ ಸೇವಕರು ಮನೆಯಿಲ್ಲದ ಸಹಪಾಠಿಗಳಿಗೆ 'ಪ್ರೀತಿಯ ಮನೆ' ಎನ್ನುವ ಹೆಸರಿನಡಿ ಹಲವು ಮನೆಗಳನ್ನು ನಿರ್ಮಿಸಿದ್ದಾರೆ.
ಕೇರಳ ವಿಶ್ವವಿದ್ಯಾಲಯ, ಹೈಯರ್ ಸೆಕೆಂಡರಿ ಸ್ಕೂಲ್, ಐಟಿಐ ಸೇರಿದಂತೆ ಕೇರಳದ ವಿವಿಧ ಶಾಲಾ-ಕಾಲೇಜುಗಳ ಎನ್‌ಎಸ್‌ಎಸ್ ತಂಡ ಸೇರಿ ಮನೆ ನಿರ್ಮಿಸಲಿದೆ.
ಇದರ ಜತೆಗೆ ಈ ದುರಂತದಿಂದ ಮಾನಸಿಕವಾಗಿ ಹೊರಬರಲು ಅಲ್ಲಿಯ ಜನರಿಗೆ ಕೌನ್ಸಲಿಂಗ್ ಮಾಡಲಿದ್ದಾರೆ. ಶಾಲಾ- ಕಾಲೇಜಿಗೆ ಮಕ್ಕಳು ಹಿಂದಿರುಗುವಂತೆ ಮಾಡಲು ಅಭಿಯಾನವನ್ನೂ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.