ಬಳಕೆದಾರರಿಗೆ ಪೋನ್ ನಂಬರ್ ನೀಡದೆಯೇ ಯೂಸರ್ ನೇಮ್ ಕ್ರಿಯೇಟ್ ಮಾಡಲು ಮತ್ತು ಸಂದೇಶ ಕಳುಹಿಸಲು ಅವಕಾಶ ನೀಡುವ ಫೀಚರ್ ಅನ್ನು ವಾಟ್ಸ್ ಆಪ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
ವಾಟ್ಸಾಪ್ ಹೊಸ ಅಪ್‌ಡೇಟ್ ಗಾಗಿ ಪರೀಕ್ಷೆ ನಡೆಸುತ್ತಿದೆ ಎಂದು Wabeta ಇನ್ಫೋ ವರದಿ ತಿಳಿಸಿದೆ.
ಗೌಪ್ಯತೆಗೆ ಆದ್ಯತೆ ನೀಡುವುದು ಮತ್ತು ಬಳಕೆದಾರರ ಪ್ರೊಫೈಲ್ ಮೂಲಕ ಯಾರನ್ನಾದರೂ ಹುಡುಕುವುದನ್ನು ಸುಲಭಗೊಳಿಸುವುದು ಗುರಿಯಾಗಿದೆ. ಬಳಕೆದಾರರ ಹೆಸರು ಅಥವಾ ಪೋನ್ ಸಂಖ್ಯೆ ತಿಳಿದಿರುವವರು ಮಾತ್ರ ಚಾಟ್ ಮಾಡಬಹುದು. ಆದರೆ ಪ್ರಸ್ತುತ ಈ ವೈಶಿಷ್ಟ್ಯವು WhatsApp ವೆಬ್ ಬಳಕೆದಾರರಿಗೆ ಮಾತ್ರ ಬರಲಿದೆ. ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ಗಳಂತೆ, WhatsApp ವಿಶಿಷ್ಟವಾದ ಬಳಕೆದಾರ ಹೆಸರನ್ನು ಹೊಂದಿರುತ್ತದೆ.
ಒಬ್ಬರ ಯೂಸರ್ ನೇಮ್ ಅನ್ನು ಇನ್ನೊಬ್ಬರು ಬಳಸುವಂತಿಲ್ಲ. ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿರುವವರು ಆ ಸೇವೆಗಳನ್ನು ಬಳಸುವುದನ್ನು ಮುಂದುವರಿಸಬಹುದು. ನವೀಕರಣವನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ಪ್ರಕಟಿಸಿಲ್ಲ.