HEALTH TIPS

ಲೆಬನಾನ್‌ನಿಂದ 100ಕ್ಕೂ ಹೆಚ್ಚು ರಾಕೆಟ್ ದಾಳಿ: ಇಸ್ರೇಲ್

         ಜೆರುಸಲೇಂ: ಲೆಬನಾನ್‌ನಿಂದ ನೂರಕ್ಕೂ ಹೆಚ್ಚು ರಾಕೆಟ್‌ಗಳನ್ನು ಭಾನುವಾರ ಕೆಲವೇ ಗಂಟೆಗಳಲ್ಲಿ ಹಾರಿಸಲಾಗಿದೆ. ದಾಳಿಯಿಂದಾಗಿ ಆವರಿಸಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

        ಕಳೆದ ವರ್ಷ ಗಾಜಾದಲ್ಲಿ ಯುದ್ಧ ಆರಂಭವಾದಾಗಿಂದ ಲೆಬನಾನಿನ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್‌ ಪಡೆ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ.

            ಆದರೆ, ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಸಂಘರ್ಷ ತೀವ್ರಗೊಂಡಿದೆ.

          'ಲೆಬನಾನ್‌ನಿಂದ ಸುಮಾರು 20 ರಾಕೆಟ್‌ಗಳನ್ನು ಬೆಳಿಗ್ಗೆ 5ಕ್ಕೂ ಮುನ್ನ ಉಡಾಯಿಸಲಾಗಿದೆ. ನಂತರ 6ರ ಹೊತ್ತಿಗೆ ಅಂದಾಜು 85 ರಾಕೆಟ್‌ಗಳನ್ನು ಹಾರಿಸಲಾಗಿದೆ' ಎಂದು ಸೇನೆ ಹೇಳಿದೆ.

ರಾತ್ರಿಯೂ ನಡೆದಿರುವ ರಾಕೆಟ್‌ ದಾಳಿಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ವೈದ್ಯಕೀಯ ತುರ್ತು ಸೇವಾ ಸಂಸ್ಥೆ ಮೇಗನ್‌ ಡೇವಿಡ್‌ ಆಯಡಮ್‌ ತಿಳಿಸಿದೆ.

         ಲೆಬನಾನ್‌ ದಾಳಿಯಿಂದ ಎಚ್ಚೆತ್ತುಕೊಂಡಿರುವ ಇಸ್ರೇಲ್‌ ಭದ್ರತಾ ದಳ, ದೇಶದ ಉತ್ತರ ಭಾಗದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಕನಿಷ್ಠ ಸೋಮವಾರ ಸಂಜೆವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries