ತ್ರಿಶೂರ್: ಗುರುವಾಯೂರಪ್ಪನಿಗೆ ಭಕ್ತರು ನೀಡುವ ಕಾಣಿಕೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.
ಆನೆಗಳು, ಚಿನ್ನ ಮತ್ತು ರತ್ನಗಳು ವಿಶೇಷವಾಗಿ ಗುರುತಿಸಲ್ಪಡುತ್ತವೆ. ವಾಹನಗಳು ಕಾಣಿಕೆಯಾಗಿ ಅರ್ಪಿಸುವ ಪ್ರಸಂಗಗಳೂ ನಡೆಯುತ್ತಿವೆ. ಅಂತಹ ವಿಶೇಷ ಕಾಣಿಕೆಯಾಗಿ ವಾಹನವನ್ನು ಗುರುವಾಯೂರಪ್ಪನಿಗೆ ಸಮರ್ಪಿಸಿದ ಬಗ್ಗೆ ವರದಿಯಾಗಿದೆ.
ಹ್ಯುಂಡೈನ ಹೊಸ ಮಾದರಿಯ ಗ್ರಾಂಡ್ ಐ 10 ಕಾರನ್ನು ಶನಿವಾರ ಗುರುವಾಯೂರಪ್ಪನಿಗೆ ಅರ್ಪಿಸಲಾಯಿತು.
ದೇವಸ್ವಂ ಅಧ್ಯಕ್ಷ ಡಾ. ವಿಕೆ ವಿಜಯನ್ ಅವರು ಹ್ಯುಂಡೈನ ಕೇರಳದ ಡೀಲರ್ ಕೆಶ್ವಿನ್ ಎಂಡಿ ಉದಯಕುಮಾರ್ ರೆಡ್ಡಿ ಅವರಿಂದ ಕಾರನ್ನು ಪಡೆದರು. ದೇವಸ್ವಂ ಚೇರ್ಮನ್ ಅವರಿಗೆ ಕಳಭಂ, ತಿರುಮುಡಿ ಮಾಲೆ, ಹಣ್ಣು, ಸಕ್ಕರೆ ಒಳಗೊಂಡ ಶ್ರೀ ಗುರುವಾಯೂರಪ್ಪನ ಪ್ರಸಾದ ನೀಡಿದರು. ದೇವಸ್ವಂ ಆಡಳಿತ ಮಂಡಳಿ ಸದಸ್ಯ ಕೆ.ಪಿ.ವಿಶ್ವನಾಥನ್, ಕೆಶ್ಚಿನ್ ಸಿಇಒ ಸಂಚುಲಾಲ್ ರವೀಂದ್ರನ್, ದೇವಸ್ಥಾನದ ಡಿಎ ಪ್ರಮೋದ್ ಕಲರಿಕಲ್, ಸ್ಟೋರ್ಸ್ & ಪರ್ಚೇಸ್ ಡಿಎ ಎಂ ರಾಧಾ, ವ್ಯವಸ್ಥಾಪಕ ಸುನೀಲ್ ಕುಮಾರ್ ಮತ್ತು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ವರ್ಷ ಮಹೀಂದ್ರ ಥಾರ್ ಅನ್ನು ಗುರುವಾಯುರುಪ್ಪನಿಗೆ ಉಡುಗೊರೆಯಾಗಿ ನೀಡಲಾಗಿತ್ತು.