HEALTH TIPS

ಧರ್ಮದ ಮೇಲಿನ ನಂಬಿಕೆಯ ಜಾಗೃತಿ ನಮ್ಮಲ್ಲಿ ಬೆಳೆಯಬೇಕು - ಹಾರಿಕಾ ಮಂಜುನಾಥ: ಯುವಕೇಸರಿ ಕಿಳಿಂಗಾರು 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ

             ಬದಿಯಡ್ಕ: ಧರ್ಮದ ಮೇಲಿನ ನಂಬಿಕೆಯ ಜಾಗೃತಿ ನಮ್ಮಲ್ಲಿ ಬೆಳೆಯಬೇಕು. ಅಷ್ಟಮಿ ವೇಷ ಧರಿಸಿದ ಪ್ರತಿಯೊಂದು ಮಗುವೂ ರಾಧಾ, ಕೃಷ್ಣರ ಆದರ್ಶವನ್ನು ಪಾಲಿಸಿ ಬೆಳೆದಾಗ ಧರ್ಮದ ರಕ್ಷಣೆಯಾಗುತ್ತದೆ. ನಮ್ಮ ಸ್ವಾಭಿಮಾನದ ಇತಿಹಾಸದ ಪರಿಚಯ ಮಕ್ಕಳಿಗೆ ಆಗಬೇಕು. ಪ್ರತಿ ಮನೆಮನೆಯೂ ಅಯೋಧ್ಯೆಯಾದಾಗ ದೇಶ ರಾಮರಾಜ್ಯವಾಗುತ್ತದೆ ಎಂದು ಯುವವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು ಹೇಳಿದರು.

              ಯುವಕೇಸರಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಕಿಳಿಂಗಾರು ಬಾಲಗಿರಿ ಇವರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಾನುವಾರ ಜರಗಿದ 10ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.

             ಹಿಂದುತ್ವದ ರಕ್ಷಣೆಯೇ ನಮ್ಮ ಧ್ಯೇಯವಾಗಬೇಕು. ಬ್ರಹ್ಮನ ಸೃಷ್ಟಿಯ ಈ ಜಗತ್ತಿನಲ್ಲಿ ಯಾವ ಬೇಧಭಾವಗಳಿಲ್ಲದೆ ಹಿಂದುಗಳೆಲ್ಲ ಸೋದರರಂತೆ ಬಾಳೋಣ. ನಮ್ಮ ಧರ್ಮದ ಅಪವಾದ ಹೊರಿಸುವ ಬುದ್ಧಿಜೀವಿಗಳಿಗೆ ತಕ್ಕ ಉತ್ತರವನ್ನು ನೀಡಲು ಪ್ರತಿಯೊಬ್ಬರೂ ತಯಾರಾಗಬೇಕು. ತನ್ನ ಬಾಲಲೀಲೆಯ ಮೂಲಕ ಕೃಷ್ಣ ಎಲ್ಲರಲ್ಲೂ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಿದ್ದಾನೆ. ನಮ್ಮ ಧರ್ಮದ ಕರ್ತವ್ಯವನ್ನು ಮರೆತು ಕುಳಿತ ಅರ್ಜುನನ್ನು ಬಡಿದೆಬ್ಬಿಸುವಲ್ಲಿ ಕೃಷ್ಣನ ಉಪದೇಶ ಕಾರಣವಾಗಿದೆ. ಮತಾಂತರದ ವಿರುದ್ಧ ನಾವು ಹಿಂದುಗಳು ಜಾಗೃತರಾಗಬೇಕು. ಇಲ್ಲವಾದಲ್ಲಿ ನಿರ್ಲಕ್ಷತನದಿಂದ ಹೊಡೆತವನ್ನು ತಿನ್ನಬೇಕಾದೀತು ಎಂದರು.

               ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಪ್ರತಿಯೊಂದು ಆಚರಣೆಗಳಿಗೂ ದಿವ್ಯವಾದ ಸಂದೇಶವಿದೆ. ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸುದೃಢ ಭಾರತದ ನಿರ್ಮಾಣ ಸಾಧ್ಯ. ದೇಶ, ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಡಲು ತಯಾರಾಗಬೇಕು. ಧರ್ಮವೆಂಬ ಆಯುಧವನ್ನು ಎಲ್ಲಾ ಹಿಂದೂಗಳೂ ಹಿಡಿದುಕೊಳ್ಳಬೇಕು ಎಂದರು.

              ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ನಿಡುಗಳ, ಯುವಕೇಸರಿ ಅಧ್ಯಕ್ಷ ಪ್ರವೀಣ್, ಸದಸ್ಯರುಗಳಾದ ಲೋಕೇಶ್ ಯು, ರಾಜೇಶ್, ಯಜ್ಞೇಶ್, ಶ್ರೀ ಶಾಸ್ತಾ ಕ್ಲಬ್ ಅಧ್ಯಕ್ಷ ರಂಜಿತ್ ಅಜ್ಜರಕೋಡಿ, ರತ್ನಗಿರಿ ಓಂಕಾರ್ ಫ್ರೆಂಡ್ಸ್ ಅಧ್ಯಕ್ಷ ಶಿವರಾಮ ಮೊಳೆಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತಿ ಗಣೇಶ್ ಪಿ.ಎಂ. ಮುಂಡಾನ್‍ತ್ತಡ್ಕ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries