ಹೈದರಾಬಾದ್: ಇಲ್ಲಿನ ಜಲಪಲ್ಲಿಯಲ್ಲಿರುವ ತೆಲುಗು ನಟ ಮೋಹನ್ ಬಾಬು ಅವರ ಮನೆಯಿಂದ ₹10 ಲಕ್ಷ ನಗದು ಕದ್ದ ಆರೋಪದ ಮೇಲೆ ಮನೆಕೆಲಸಗಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹೈದರಾಬಾದ್: ಇಲ್ಲಿನ ಜಲಪಲ್ಲಿಯಲ್ಲಿರುವ ತೆಲುಗು ನಟ ಮೋಹನ್ ಬಾಬು ಅವರ ಮನೆಯಿಂದ ₹10 ಲಕ್ಷ ನಗದು ಕದ್ದ ಆರೋಪದ ಮೇಲೆ ಮನೆಕೆಲಸಗಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೋಹನ್ ಅವರ ಆಪ್ತ ಕಾರ್ಯದರ್ಶಿ ಭಾನುವಾರ ಮನೆಗೆ ಬಂದಿದ್ದರು.
ಬ್ಯಾಗ್‌ನಲ್ಲಿದ್ದ ಹಣ ನಾಪತ್ತೆಯಾದ ಬಗ್ಗೆ ಪಹಾಡಿಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ತಿರುಪತಿಯಲ್ಲಿ ವಶಕ್ಕೆ ಪಡೆದು ಹೈದರಾಬಾದ್‌ಗೆ ಕರೆತಂದಿದ್ದಾರೆ. ಬುಧವಾರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ ₹7.36 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೊತ್ತವನ್ನು ಆತ ಖರ್ಚು ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.