ಕಾಸರಗೋಡು: ವಿದೇಶದಲ್ಲಿ ಉದ್ಯೋಗಿಯಾಗಿರುವ ನಗರದ ನಿವಾಸಿಯೊಬ್ಬರ 10ಲಕ್ಷ ರೂ. ನಗದು ಆನ್‍ಲೈನ್ ಮೂಲಕ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಅಶಿಕೂರ್ ಇಸ್ಲಾಂ ಹಾಗೂ ಪೊಯಿಜುಲ್ ಹಕ್ ಬಂಧಿತರು.
2023 ಏ. 1ರಿಂದ 2024 ಜೂ. 30ರ ಮಧ್ಯೆ ಹಲವು ಬಾರಿಯಾಗಿ ಒಟ್ಟು 10ಲಕ್ಷ ರೂ. ನಗದು ದೋಚಲಾಗಿತ್ತು. ಈ ಬಗ್ಗೆ ಲಭಿಸಿದ ದೂರಿನನ್ವಯ ತನಿಖೆ ನಡೆಸಿದಾಗ ಮಲಪ್ಪುರಂ, ತ್ರಿಶ್ಯೂರ್ ಹಾಗೂ ಅಸ್ಸಾಂನ ನಾಗೋನ್ ಜಿಲ್ಲೆಯಿಂದ ಇವರ ಖಾತೆಯಿಂದ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಗರ ಠಾಣೆ ಎಸ್.ಐ ನಳಿನಾಕ್ಷನ್ ನೇತೃತ್ವದ ತಂಡ ಅಸ್ಸಾಂಗೆ ತೆರಳಿ ವಿಚಾರಣೆ ನಡೆಸಿದಾಗ ಮೂರು ಮಂದಿ ಆರೋಪಿಗಳ ಮಾಹಿತಿ ಲಭಿಸಿತ್ತು. ಇವರಲ್ಲಿ ಇಬ್ಬರು ಕೇರಳಕ್ಕೆ ತೆರಳಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ತೃಶ್ಯೂರ್‍ನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.