HEALTH TIPS

ನೇಪಾಳದಲ್ಲಿ ಪ್ರವಾಹ, ಭೂಕುಸಿತ: ಸಾವಿನ ಸಂಖ್ಯೆ 112ಕ್ಕೇರಿಕೆ

         ಠ್ಮಂಡು: ನೇಪಾಳದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಪ್ರವಾಹ, ಭೂಕುಸಿತ ಮತ್ತಿತರ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿದೆ.

       ಪೂರ್ವ ಹಾಗೂ ಮಧ್ಯ ನೇಪಾಳದ ಹಲವು ಪ್ರದೇಶಗಳು ಶುಕ್ರವಾರದಿಂದಲೂ ಮುಳುಗಡೆಯಾಗಿವೆ. ದೇಶದ ಕೆಲವು ಭಾಗದಲ್ಲಿ ಪ್ರವಾಹ ಉಲ್ಬಣಗೊಂಡಿದೆ.

          ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ, ಭೂಕುಸಿತ, ತಗ್ಗು ಪ್ರದೇಶಗಳ ಮುಳುಗಡೆಯಿಂದಾಗಿ 64 ಜನರು ನಾಪತ್ತೆಯಾಗಿದ್ದಾರೆ. 45 ಮಂದಿ ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್‌ ಪಡೆಯ ಮೂಲಗಳು ತಿಳಿಸಿವೆ.

            ಕಠ್ಮಂಡು ಕಣಿವೆಯಲ್ಲಿ ಒಟ್ಟು 48 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 195 ಮನೆಗಳು ಹಾಗೂ 8 ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿಯು 3,100 ಜನರನ್ನು ರಕ್ಷಿಸಿದ್ದಾರೆ.

40-45 ವರ್ಷಗಳಲ್ಲಿ ಕಠ್ಮಂಡು ಕಣಿವೆಯಲ್ಲಿ ಇಂತಹ ವಿನಾಶಕಾರಿ ನೆರೆಯನ್ನು ನಾವು ನೋಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾಗ್ಮತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

           ಧಾಡಿಂಗ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಚಲಿಸುತ್ತಿದ್ದ ಬಸ್‌ವೊಂದು ಮಣ್ಣಿನಡಿ ಸಿಲುಕಿ ಕನಿಷ್ಠ 19 ಜನರು ಜೀವಂತ ಸಮಾಧಿಯಾಗಿದ್ದಾರೆ. ಭಕ್ತಪುರದಲ್ಲಿ ಮನೆ ಕುಸಿದು ಐವರು ಮೃತಪಟ್ಟಿದ್ದಾರೆ.

            ಮಕವಾನಪುರದಲ್ಲಿ ನೇಪಾಳ ಫುಟ್‌ಬಾಲ್‌ ಅಸೋಸಿಯೇಷನ್‌ ನಡೆಸುತ್ತಿರುವ ತರಬೇತಿ ಕೇಂದ್ರವು ಭೂಕುಸಿತದಿಂದ ಕುಸಿದಿದ್ದು, ಆರು ಮಂದಿ ಆಟಗಾರರು ಅಸುನೀಗಿದ್ದಾರೆ. ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ. ಮಂಗಳವಾರದವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries