ಕೊಲ್ಲಂ: ಕೇರಳೀಯರು ಕೊನೆಗೂ ವಾಡಿಕೆಗೆ ಚ್ಯುತಿ ತಾರದೆ ಮರ್ಯಾದೆ ಉಳಿಸಿ ದಾಖಲೆ ಸರಿಗಟ್ಟಿದ್ದಾರೆ. ಉತ್ರಾಡಂ ದಿನದಂದು ದಾಖಲೆಯ ಮದ್ಯ ಮಾರಾಟ ದಾಖಲಾಗಿದೆ.
ಕೇವಲ ಒಂದೇ ದಿನದಲ್ಲಿ 124 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮಾಡುವ ಔಟ್‍ಲೆಟ್‍ಗಳಲ್ಲಿ ಕೊಲ್ಲಂ ಜಿಲ್ಲೆಯ ಔಟ್‍ಲೆಟ್‍ಗಳು ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಆಶ್ರಮ ಔಟ್ಲೆಟ್ ಮೊದಲ ಸ್ಥಾನದಲ್ಲಿದೆ. 11 ಗಂಟೆಗಳಲ್ಲಿ 1,15,40,870 ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕರುನಾಗಪ್ಪಲ್ಲಿಯ ಔಟ್ಲೆಟ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1,15,02,520 ಮಾರಾಟವಾಗಿದೆ. ಈ ಅಂಕಿಅಂಶಗಳನ್ನು ಕೇರಳ ರಾಜ್ಯ ಬಿವರೇಜ್ ಕಾರ್ಪೋರೇಶನ್ ಬಿಡುಗಡೆ ಮಾಡಿದೆ.
ತ್ರಿಶೂರ್ ಚಾಲಕುಡಿ ಮಳಿಗೆಯಲ್ಲಿ 1,04,47,620 ರೂ.ಗಳ ಮದ್ಯ ಮಾರಾಟವಾಗಿ ಮೂರನೇ ಸ್ಥಾನದಲ್ಲಿದೆ. ತ್ರಿಶೂರ್ ಇರಿಂಞಲಕುಡ ಔಟ್‍ಲೆಟ್‍ನಲ್ಲಿ 1,00,73,460 ರೂಪಾಯಿ, ತಿರುವನಂತಪುರಂ ಪವರ್‍ಹೌಸ್ ರೋಡ್ ಔಟ್‍ಲೆಟ್‍ನಲ್ಲಿ 99,40,910 ರೂಪಾಯಿ ಮತ್ತು ಕೊಟ್ಟಾಯಂ ಚಂಗನಾಸ್ಸೆರಿ ಔಟ್‍ಲೆಟ್‍ನಲ್ಲಿ 94,65,880 ರೂಪಾಯಿ ಮದ್ಯ ಮಾರಾಟವಾಗಿದೆ.
124 ಕೋಟಿ ಮೌಲ್ಯದ ಮದ್ಯವನ್ನುಕೇರಳೀಯರು ಈ ಮೂಲಕ ಒಳಸೇರಿಸಿದ್ದಾರೆ. ಕಳೆದ ವರ್ಷ 116 ಕೋಟಿ ರೂ.ಮದ್ಯ ಮಾರಾಟವಾಗಿತ್ತು. ಆದರೆ ಉತ್ತರಾಡಂ ವರೆಗಿನ ಒಂಬತ್ತು ದಿನಗಳ ಕಾಲ ಮದ್ಯ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಈ ಬಾರಿ ಬೆವ್ಕೋ 701 ಕೋಟಿ ರೂ.ಗಳ ಮದ್ಯ ಮಾರಾಟ ಮಾಡಲು ಸಾಧ್ಯವಾಗಿದೆ. ಕಳೆದ ವರ್ಷ ಈ ದಿನಗಳಲ್ಲಿ 715 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಇದರೊಂದಿಗೆ ಮದ್ಯ ಮಾರಾಟದಲ್ಲಿ 14 ಕೋಟಿ ರೂ.ಆದಾಯ ಲಭಿಸಿದೆ ಎಂದು ಅಂಕಿಅಂಶ ತಿಳಿಸಿದೆ.