ತಿರುವನಂತಪುರಂ: ಮಲಪ್ಪುರಂ ಜಿಲ್ಲೆಯಲ್ಲಿ ನಿಪಾ ಭಾಧಿಸಿ ಮೃತಪಟ್ಟ ಬೆನ್ನಿಗೇ ಅನುಮಾನದಿಂದ ಸಂಗ್ರಹಿಸಲಾದ 13ಮಂದಿಯ ಫಲಿತಾಂಶಗಳು ನಕಾರಾತ್ಮಕವಾಗಿವೆ. ಹೆಚ್ಚಿನ ಅಪಾಯ ಸಾಧ್ಯತೆಯಿದೆ ಎಂದು ಭಾವಿಸಲಾದ 13 ಮಂದಿಯ ಜೊಲ್ಲುರಸ ಪರೀಕ್ಷಾ ಫಲಿತಾಂಶ ನಕಾರಾತ್ಮಕವಾಗಿದೆ.
ಮೃತರಾದವರ ಸಂಪರ್ಕ ಪಟ್ಟಿಯಲ್ಲಿ 175 ಜನರು ಇದ್ದರು. 13 ಮಂದಿಯ ಫಲಿತಾಂಶ ಇದೀಗ ನಕಾರಾತ್ಮಕವಾಗಿದೆ. 26 ಹೈರಿಸ್ಟ್ ವರ್ಗದಲ್ಲಿವೆ.
ಪರಿಸ್ಥಿತಿ ಬಗ್ಗೆ ಆತಂಕಬೇಡ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ರೋಗ ಹರಡಿಲ್ಲ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನ ನಡೆಯಲಿದೆ.
ರೋಗಲಕ್ಷಣಗಳನ್ನು ಹೊಂದಿರುವ ಎಲ್ಲ ಜನರ ಜೊಲ್ಲುರಸ ಪರೀಕ್ಷೆ ಮುಂದುವರಿದಿದೆ. ಕರ್ನಾಟಕ ಸರ್ಕಾರದೊಂದಿಗೆ ಕೇರಳ ಸಂವಹನ ನಡೆಸಿದ್ದು, ಮೃತ ವ್ಯಕ್ತಿ ಬೆಂಗಳೂರಿನಿಂದ ಕೇರಳಕ್ಕೆ ಬಂದವನಾದ್ದರಿಂದ ಪರಿಶೀಲನೆ ನಡೆಸಲಾಗಿದೆ.