ಪೆರ್ಲ: ನೇತಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ನೇತಾಜಿ ಗ್ರಾಮೀಣ ಗ್ರಂಥಾಲಯ ಸಮಿತಿ ವತಿಯಿಂದ ಪೆರ್ಲದಲ್ಲಿ ನಡೆಸಿಕೊಂಡುಬರಲಾಗುತ್ತಿರುವ ಓಣಂ ಹಬ್ಬದ ಆಚರಣೆಯ ರಜತ ಮಹೋತ್ಸವ ಆಚರಣೆ ಸೆ. 14ರಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಜರುಗಲಿದೆ.
ಬೆಳಗ್ಗೆ 10ರಿಂದ ರಾತ್ರಿ ತನಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ವಿವಿಧ ಸ್ಪರ್ಧೆ, ಮಧ್ಯಾಹ್ನ ಓಣಂ ಔತಣ, ಸಂಜೆ ಸಭಾ ಕಾರ್ಯಕ್ರಮ ನಡೆಯುವುದು. ಕರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಸಮಾರಂಭ ಉದ್ಘಾಟಿಸುವರು. ಸ್ವಾಗತ ಸಂಘದ ಅಧ್ಯಕ್ಷ ಸುಧಾಕರ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್ ಕುಞಂಬು, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷ, ಮಾಜಿ ಶಾಸಕ ಕೆ.ವಿ ಕುಞÂರಾಮನ್, ಗ್ರಾಪಂ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಗ್ರಾಪಂ ಸದಸ್ಯೆ ಸೌದಾಬಿ ಹನೀಫ್, ಮಾಜಿ ಸದಸ್ಯ ಉದಯ ಚೆಟ್ಟಿಯಾರ್, ಉದ್ಯಮಿಗಳಾದ ಅಬ್ದುಲ್ಲ ಮಾದುಮೂಲೆ, ಅಜಯ್ ಪೈ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ಎಸ್ಸೆಸೆಲ್ಸಿಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾದ ಪೆರ್ಲ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕೃಷಿಕ ಕೃಷ್ಣ ಭಟ್ ಜೆಜೆಕ್ಕಾರ್, ಸಾಹಿತಿ ರಾಜಶ್ರೀ ರೈ, ರಂಗ ಕಲಾವಿದ ಉದಯ ಸಾರಂಗ್ ಅವರಿಗೆ ಅಭಿನಂದನೆ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಪ್ರಶಸ್ತಿ ವಿಜೇತ ಕುಡ್ಲ ಕುಸಾಲ್ ಕಲಾವಿದರಿಂದ ಕಾಮೆಡಿ ಎಕ್ಸ್‍ಪ್ರೆಸ್, ಖ್ಯಾತ ಚಲನಚಿತ್ರ ತಾರೆಯರಾದ ಶಿವದಾಸ್ ಮಟ್ಟನ್ನೂರ್, ಕಲಾಭವನ್ ರಾಗೇಶ್ ಮೊದಲಾದವರನ್ನೊಳಗೊಂಡ ತಂಡದಿಂದ ಮೆಗಾ ಶೋ ಕಾರ್ಯಕ್ರಮ ನಡೆಯುವುದು.