ಕೊಚ್ಚಿ: ಮನೆಗೆ ಬೀಗ ಹಾಕಿ ಓಡಾಡುವವರಿಗೆ ಪೋಲೀಸರು ನೆರವು ನೀಡಲಿದ್ದು, ಮಾಹಿತಿ ನೀಡಲು ಅಧಿಕಾರಿಗಳು ಮಾರ್ಗ ಸಿದ್ಧಪಡಿಸಿದ್ದಾರೆ. ಪೆÇಲೀಸರ ಅಧಿಕೃತ ಮೊಬೈಲ್ ಆ್ಯಪ್ ನಲ್ಲಿರುವ `ಲಾಕ್ಡ್ ಹೌಸ್ ಇನ್ಫಾರ್ಮೇಶನ್~ ಸೌಲಭ್ಯವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು.
ಈ ಬಗ್ಗೆ ಕೇರಳ ಪೋಲೀಸರು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೀಗ ಹಾಕಿರುವ ಮನೆ ಮಾಹಿತಿ ಸೌಲಭ್ಯ ಬಳಸಿದರೆ ಪೋಲೀಸರು ಮನೆ ಇರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸುತ್ತಾರೆ. ಗರಿಷ್ಠ 14 ದಿನಗಳವರೆಗೆ ಮನೆ ಮತ್ತು ಸುತ್ತಮುತ್ತಲಿನ ಪರಿಸರ ಪೋಲೀಸರು ಕಣ್ಗಾವಲಿನಲ್ಲಿರುತ್ತದೆ.
ಹೊರಡುವ ದಿನ, ಮನೆಯ ಸ್ಥಳ, ಮನೆಯ ಹೆಸರು, ಮನೆಯ ಸಮೀಪದಲ್ಲಿರುವ ಸಂಬಂಧಿಕರು ಅಥವಾ ನೆರೆಹೊರೆಯವರ ಹೆಸರುಗಳು ಮತ್ತು ಪೋನ್ ಸಂಖ್ಯೆಗಳನ್ನು ಅಪ್ಲಿಕೇಶನ್‍ನಲ್ಲಿ ನಮೂದಿಸಬೇಕಾಗುತ್ತದೆ. ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‍ನಲ್ಲಿಯೂ ಲಭ್ಯವಿದೆ.