HEALTH TIPS

ಸಿರಿಬಾಗಿಲು ಪ್ರತಿಷ್ಠಾನದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ: 150ಕ್ಕೂ ಹೆಚ್ಚು ಮಂದಿ ಭಾಗಿ: ಗ್ರಾಮೀಣ ಪ್ರದೇಶದಲ್ಲಿ ಗಮನ ಸೆಳೆದ ಸೇವಾ ಚಟುವಟಿಕೆ

ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ನಿನ್ನೆ ಕೆ.ಎಂ.ಸಿ .ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಎರಡನೇ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ. ಎಸ್. ರಾವ್ ದೀಪ ಪ್ರಜ್ವಲನೆಗೈದು ಶಿಬಿರ  ಉದ್ಘಾಟಿಸಿದರು. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆದು ಬಡಬಗ್ಗರಿಗೆ ಇದರಿಂದ ಉಪಯೋಗವಾಗಬೇಕು. ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು, ಸಿರಿಬಾಗಿಲು ಪ್ರತಿμÁ್ಠನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇಂತಹ ಚಟುವಟಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. 


ಕೆ.ಎಂ.ಸಿ.ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಅರವಿಂದ ಎನ್. ಅವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಮಾಹಿತಿ ತರಗತಿ ನೀಡಿದರು. ಮಧ್ಯಪಾನ, ಗುಟ್ಕ ಸೇವನೆ, ಸಿಗರೇಟ್ ಸೇವನೆ ಇತ್ಯಾದಿ ದುಶ್ಚಟಗಳಿಂದ ಸಮಾಜದ ಎಲ್ಲರೂ ಮುಕ್ತರಾಗಬೇಕು ಎಂದರು. ಕ್ಯಾನ್ಸರ್ ಖಾಯಿಲೆಗೆ ಯಾರು ಭಯಭೀತರಾಗಬೇಕಾಗಿಲ್ಲ. ಕ್ಯಾನ್ಸರ್ ಬಂದರೆ ಹೇಗೆ ಗುಣಪಡಿಸಬಹುದು? ಯಾವ ರೀತಿ ಜಾಗೃತಿ ವಹಿಸಬೇಕು ?ಇತ್ಯಾದಿ ವಿಚಾರಗಳನ್ನು ತೆರೆದಿಟ್ಟರು. ಕಲಾ ವಲಯದ ಶ್ರೇಷ್ಠ ಸಂಸ್ಥೆ ಸಿರಿಬಾಗಿಲು ಪ್ರತಿμÁ್ಠನ ಇಂತಹ ಚಟುವಟಿಕೆ ನಡೆಸುತ್ತಿರುವುದು ತಂಬಾ ಸಂತಸ ತಂದಿದೆ ಎಂದರು. 


ವಾಸುದೇವ ಕಾರಂತ ಉಜಿರೆಕೆರೆ,  ಇ.ಕೆ. ನಾಯಿನಾರ್ ಆಸ್ಪತ್ರೆಯ ಎಲುಬು ತಜ್ಞ ಡಾ. ಹರಿ ಕಿರಣ ಬಂಗೇರ ಉಪಸ್ಥಿತರಿದ್ದರು. ಪ್ರತಿμÁ್ಠನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿ, ಚಂದ್ರಕಲಾ ನೀರಾಳ ವಂದಿಸಿದರು. ಜಗದೀಶ ಕೆ. ಕೂಡ್ಲು ನಿರೂಪಿಸಿದರು. 


ಬಳಿಕ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ವೈದ್ಯಕೀಯ ಶಿಬಿರದ ಸಂಘಟಕ ಉದಯ ಭಟ್ ನೇತೃತ್ವದಲ್ಲಿ ಶಿಬಿರ ನಡೆಯಿತು. 150ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಯೋಜನ ಪಡೆದರು. ಪ್ರತಿμÁ್ಠನದ ಟ್ರಸ್ಟಿ ಸುಮಿತ್ರಾ ಮಯ್ಯ, ಶ್ರೀಮುಖ ಮಯ್ಯ, ಶ್ರೀರಾಜ್ ಮಯ್ಯ, ಶಿವ ನಾರಾಯಣ ವಾಟ್ಸಾಪ್ ಬಳಗದ ಸದಸ್ಯರು ಸಹಕರಿಸಿದರು.ಊರಿನ ಪ್ರಮುಖರು ಭಾಗವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries