ತಿರುವನಂತಪುರಂ: ಪುನರ್ ವಿಂಗಡಣೆ ಮೂಲಕ 1,577 ಹೊಸ ವಾರ್ಡ್ ಗಳು ಸೃಷ್ಟಿಯಾಗಿದ್ದು, ಇವುಗಳಲ್ಲಿ ಯಾವುದು ತಮ್ಮ ಪರವಾಗಿರಲಿದೆ ಎಂದು ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ.
ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಹೊಸ ವಾರ್ಡ್ ಮತ್ತು ವಿಭಾಗಗಳ ಸಂಖ್ಯೆ ಹೆಚ್ಚಳಗೊಳಿಸಲಾಗಿದೆ. 941 ಗ್ರಾ.ಪಂ.ಗಳಲ್ಲಿ 1375 ಹೆಚ್ಚು ವಾರ್ಡ್‍ಗಳನ್ನು ರಚಿಸಲಾಗಿದೆ. 152 ಬ್ಲಾಕ್ ಪಂಚಾಯಿತಿಗಳಲ್ಲಿ 2267 ವಿಭಾಗಗಳಿವೆ. ಎಲ್ಲ ಜಿಲ್ಲಾ ಪಂಚಾಯಿತಿಗಳಲ್ಲಿ 15 ವಿಭಾಗಗಳ ಹೆಚ್ಚಳವಾಗಿದೆ.
2011ರ ಜನಗಣತಿ ಆಧಾರದ ಮೇಲೆ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಾರ್ಡ್‍ಗಳ ಮರುವಿಂಗಡಣೆ ನಡೆದಿದ್ದು, ಇದರಲ್ಲಿ ರಾಜಕೀಯ ಹಿತಾಸಕ್ತಿ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ವಾರ್ಡ್‍ಗಳನ್ನು ಮರುವಿಂಗಡಣೆ ಮಾಡಿದಾಗ, ಗೆಲ್ಲುವ ಮತ್ತು ಸೋಲುವ ಸೂತ್ರಗಳು ಅವುಗಳ ಯಶಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಕಾದುನೋಡಬೇ|ಕಿದೆ?