ನವದೆಹಲಿ: ಅಕ್ಟೋಬರ್‌ನಲ್ಲಿ ಹಬ್ಬಗಳು ಮತ್ತು ಕೇಂದ್ರ, ರಾಜ್ಯದ ರಜಾದಿನಗಳಿಂದ 15 ದಿನ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ(Banks Holiday). ಗ್ರಾಹಕರು ಬ್ಯಾಂಕ್ ಕೆಲಸಗಳಿದ್ದರೆ, ಒಮ್ಮೆ ರಜಾದಿನಗಳನ್ನು ಗಮನಿಸಿ ಬ್ಯಾಂಕ್ ಗಳ ಶಾಖೆಗಳಿಗೆ ಭೇಟಿ ನೀಡುವುದು ಒಳಿತು.
ಆರ್‌ಬಿಐ ಅಕ್ಟೋಬರ್ ತಿಂಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ದೇಶಾದ್ಯಂತ ರಜೆ ಇರುತ್ತದೆ. ಇನ್ನು ಬ್ಯಾಂಕ್ ರಜಾದಿನಗಳಲ್ಲಿ ಎಲ್ಲಾ ಭಾನುವಾರಗಳು ಮತ್ತು ಎರಡು ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಇನ್ನು ವಿವಿಧ ರಾಜ್ಯಗಳಲ್ಲಿ ಮಹಾಲಯ ಅಮಾವಾಸ್ಯೆ, ನವರಾತ್ರಿ ಸ್ಥಾನ, ದುರ್ಗಾ ಪೂಜೆ, ಮಹಾ ಸಪ್ತಮಿ, ಆಯುಧ ಪೂಜೆ ಸಂದರ್ಭದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು.
ದುರ್ಗಾ ಅಷ್ಟಮಿ, ದಸರಾ, ಮಹಾನವಮಿ, ವಿಜಯದಶಮಿ/ ದುರ್ಗಾಪೂಜೆ (ದಾಸೈನ್), ಲಕ್ಷ್ಮೀ ಪೂಜೆ, ಮಹರ್ಷಿ ವಾಲ್ಮೀಕಿ ಜಯಂತಿ/ಕಟಿ ಬಿಹು, ಪ್ರವೇಶ ದಿನ, ದೀಪಾವಳಿ (ದೀಪಾವಳಿ)/ಕಾಳಿ ಪೂಜೆ/ಸರ್ದಾರ್ ವಲ್ಲಭ' ಜನ್ಮದಿನ/ನರಕ ಚತುರ್ದಶಿ ಹೀಗೆ ಹಬ್ಬ, ರಜಾದಿನಗಳ ಸಾಲೇ ಇದ್ದು, ಈ ದಿನಗಳನ್ನು ಗಮನಿಸಿ ಬ್ಯಾಂಕ್ ವ್ಯವಹಾರ ನಡೆಸುಸುದು ಉತ್ತಮ.
ಇದಿಷ್ಟೇ ಅಲ್ಲದೆ, ಜಮ್ಮುವಿನಲ್ಲಿ ವಿಧಾನಸಭೆ ಚುನಾವಣೆ ಅಕ್ಟೋಬರ್ 1 ರಂದು ನಡೆಯುತ್ತಿರುವುದರಿಂದ ಅಂದು ಬ್ಯಾಂಕುಗಳನ್ನು ಮುಚ್ಚಲಾಗಿರುತ್ತದೆ.