ಮಧೂರು: ರಾಜರ್ಷಿ, ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಹಾಗು ತೆಂಕುತಿಟ್ಟು ಯಕ್ಷಗಾನದ ಬೃಹತ್ ಮ್ಯೂಸಿಯಂನ ಯೋಜನೆಯನ್ನು ಮೆಚ್ಚಿ ಆರಂಭದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಇದೀಗ ಮತ್ತೆ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಪ್ರಸಾದ ರೂಪವಾಗಿ 15 ಲಕ್ಷ ರೂಪಾಯಿಗಳ ಧನಸಹಾಯ ನೀಡಿ ಹರಸಿರುತ್ತಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಸಾಂಸ್ಕೃತಿಕ ಭವನ, ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಪೂಜ್ಯ ಖಾವಂದರು, ಯಕ್ಷಗಾನ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಧ್ಯಯನಕ್ಕೆ ಇದೊಂದು ದೊಡ್ಡ ಕೊಡುಗೆಯಾಗಲಿದೆ ಎಂದು ಶುಭ ಹಾರೈಸಿದ್ದರು. ಇತ್ತೀಚೆಗೆ ಶ್ರೀ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಭೇಟಿ ನೀಡಿ ಇದೊಂದು ಕಲಾ ವಲಯದ ಅದ್ಬತ ಎಂದಿದ್ದರು.