ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ಕೋ ಓಪರೇಟಿವ್ ಸೊಸೈಟಿಯಿಂದ ದೋಚಿದ್ದ ಚಿನ್ನಾಭರಣಗಳ ಪೈಕಿ 160ಗ್ರಾಂ ಚಿನ್ನವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪೆರಿಯದ ಸೊಸೈಟಿಯೊಂದರಲ್ಲಿ ಅಡವಿರಿಸಿದ್ದ ಚಿನ್ನವನ್ನು ರಾಜ್ಯ ಕ್ರೈಂ ಬ್ರಾಂಚ್ ಆರ್ಥಿಕ ಅಪರಾಧ ಪತ್ತೆದಳ ಇನ್ಸ್‍ಪೆಕ್ಟರ್ ಅನೀಶ್ ನೇತೃತ್ವದ ತನಿಖಾ ತಂಡ ಪತ್ತೆಹಚ್ಚಿದ್ದು, ಇದನ್ನು ವಶಕ್ಕೆ ಪಡೆದುಕೊಳ್ಳುವ ಕ್ರಮ ಆರಂಭಿಸಿದೆ. ಸೊಸೈಟಿಯಲ್ಲಿ 4.76ಕೋಟಿ ರೂ. ಮೊತ್ತದ ವಂಚನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸೊಸೈಟಿ ಕಾರ್ಯದರ್ಶಿ ಕೆ. ರತೀಶ್‍ನನ್ನು ಬಂಧಿಸಲಾಗಿದೆ.