ನವದೆಹಲಿ: ದೇಶದಾದ್ಯಂತ ಇದೇ 17ರಿಂದ ಅಕ್ಟೋಬರ್ 2ರವರೆಗೆ (15 ದಿನಗಳು) ಶುಚಿತ್ವ ಅಭಿಯಾನ ನಡೆಯಲಿದ್ದು, ಅದಕ್ಕಾಗಿ ಎರಡು ಲಕ್ಷಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ನವದೆಹಲಿ: ದೇಶದಾದ್ಯಂತ ಇದೇ 17ರಿಂದ ಅಕ್ಟೋಬರ್ 2ರವರೆಗೆ (15 ದಿನಗಳು) ಶುಚಿತ್ವ ಅಭಿಯಾನ ನಡೆಯಲಿದ್ದು, ಅದಕ್ಕಾಗಿ ಎರಡು ಲಕ್ಷಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಈ ವರ್ಷದ 'ಸ್ವಚ್ಛತಾ ಕಿ ಸೇವಾ ಅಭಿಯಾನ'ದ ವಿಷಯವು 'ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ' ಆಗಿದ್ದು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಸಚಿವಾಲಯಗ: ಸಹಯೋಗದೊಂದಿಗೆ ನಡೆಯಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಸುದ್ದಿಗಾರರಿಗೆ ಹೇಳಿದರು.