HEALTH TIPS

ಒಂದೇ ತಿಂಗಳಲ್ಲಿ 1.75 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

            ವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ಶೇಕಡ 10ರಷ್ಟು ಹೆಚ್ಚಳವಾಗಿದ್ದು, ಆಗಸ್ಟ್​ನಲ್ಲಿ 1.75 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು 2024-25ನೇ ಆರ್ಥಿಕ ವರ್ಷದ ಎರಡನೇ ದೊಡ್ಡ ಸಂಗ್ರಹವಾಗಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

            2023ರ ಆಗಸ್ಟ್​ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಆದಾಯ 1.59 ಲಕ್ಷ ಕೋಟಿ ರೂ.ಗಳಾಗಿತ್ತು.

            2024ರ ಆಗಸ್ಟ್​ನಲ್ಲಿ, ದೇಶೀಯ ಆದಾಯವು ಶೇ.9.2ರಷ್ಟು ಏರಿಕೆ ಯಾಗಿ ಸುಮಾರು 1.25 ಲಕ್ಷ ಕೋಟಿ ರೂ.ಗೆ ತಲುಪಿದೆ. ಸರಕುಗಳ ಆಮದುಗಳಿಂದ ಒಟ್ಟು ಜಿಎಸ್​ಟಿ ಆದಾಯವು 12.1% ರಷ್ಟು ಏರಿಕೆಯಾಗಿದ್ದು, 49,976 ಕೋಟಿ ರೂ.ಗೆ ಏರಿಕೆಯಾಗಿದೆ. ಆಗಸ್ಟ್​ನಲ್ಲಿ 24,460 ಕೋಟಿ ರೂ. ಮರುಪಾವತಿ ನೀಡಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚಳವಾಗಿದೆ. ಮರುಪಾವತಿಯ ನಂತರ ಜಿಎಸ್​ಟಿ ನಿವ್ವಳ ಆದಾಯವು 1,50,501 ಕೋಟಿ ರೂ. ಆಗಿದೆ.

ಎನ್​ಬಿಸಿಸಿ 1:2 ಬೋನಸ್ ಷೇರು

            ಕೇಂದ್ರ ಸರ್ಕಾರಿ ಸ್ವಾಮ್ಯದ ನವರತ್ನ ಕಂಪನಿಯಾದ ನ್ಯಾಷನಲ್ ಬಿಲ್ಡಿಂಗ್ ಕನ್​ಸ್ಟ್ರಕ್ಷನ್ ಕಂಪನಿ (ಎನ್​ಬಿಸಿಸಿ) ತನ್ನ ಷೇರುದಾರರಿಗೆ 1:2 ಅನುಪಾತದಲ್ಲಿ ಬೋನ್ ಷೇರು ನೀಡುವುದಾಗಿ ವಾಗ್ದಾನ ಮಾಡಿದ್ದು, ಇದಕ್ಕಾಗಿ 90 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆ. ಕಂಪನಿಯ ಈಕ್ವಿಟಿ ಬಂಡವಾಳದಲ್ಲಿರುವ ಉಚಿತ ಮೀಸಲನ್ನು (ಫ್ರೀ ರಿಸರ್ವ್) ಇದಕ್ಕಾಗಿ ಬಳಸಲಾಗುವುದು. ಈ ನಿರ್ಧಾರಕ್ಕೆ ಮುಂಬರುವ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರು ಒಪ್ಪಿಗೆ ನೀಡುವುದು ಬಾಕಿ ಇದೆ ಎಂದು ಎನ್​ಬಿಸಿಸಿ ತಿಳಿಸಿದೆ. ಬೋನಸ್ ಷೇರಿಗೆ ಅರ್ಹತಾ ದಿನಾಂಕವನ್ನು 2024ರ ಅ. 7ಕ್ಕೆ ಕಂಪನಿ ನಿಗದಿಪಡಿಸಿದೆ. ''ಎನ್​ಬಿಸಿಸಿ ಉತ್ತಮ ಆರ್ಥಿಕ ಸ್ಥಿತಿ ಹೊಂದಿದೆ ಎನ್ನುವುದಕ್ಕೆ ಬೋನಸ್ ಷೇರು ನೀಡುತ್ತಿರುವುದೇ ನಿದರ್ಶನವಾಗಿದೆ' ಎಂದು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮಹಾದೇವಸ್ವಾಮಿ ಹೇಳಿದ್ದಾರೆ. 2017ರಲ್ಲಿ ಕೂಡ ಎನ್​ಬಿಸಿಸಿ 1:2 ಅನುಪಾತದಲ್ಲಿ ಬೋನಸ್ ಷೇರು ಘೋಷಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries