ಗುವಾಹಟಿ: ಅಕ್ರಮವಾಗಿ ಭಾರತ ಪ್ರವೇಶಿಸಿದ ಆರೋಪದ ಮೇಲೆ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ಎಂಟು ಮಕ್ಕಳು ಸೇರಿದಂತೆ17 ಬಾಂಗ್ಲಾದೇಶೀಯರನ್ನು ಶನಿವಾರ ವಾಪಸ್ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಕ್ರಮ ವಲಸಿಗರ ಫೋಟೋವನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ, ಒಳ ನುಸುಳುವಿಕೆಯ ವಿರುದ್ಧ ದೃಢವಾದ ನಿಲುವು ತಳೆದ ಅಸ್ಸಾಂ ಪೊಲೀಸರು ಇಂದು ಬೆಳ್ಳಂಬೆಳಗ್ಗೆ 9 ಬಾಂಗ್ಲಾದೇಶಿಯರು ಮತ್ತು 8 ಮಕ್ಕಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಬಾಂಗ್ಲಾದೇಶದ ಪ್ರಕ್ಷುಬ್ಧತೆಯ ನಂತರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಅಸ್ಸಾಂ ರಾಜ್ಯದಲ್ಲಿ ಇದುವರೆಗೆ ಸುಮಾರು 100 ಜನರನ್ನು ಬಂಧಿಸಿ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.