ಕೊಟ್ಟಾಯಂ: ಸಿಬಿಐ ಅಧಿಕಾರಿ ಎಂದು ಬೆದರಿಸಿ ನಡೆಸಿದ ಆನ್‍ಲೈನ್ ವಂಚನೆಯಲ್ಲಿ ಕಾಂಜಿರಪಳ್ಳಿಯ ಗೃಹಿಣಿಯೊಬ್ಬರು 1.86 ಕೋಟಿ ರೂ.ಕಳಕೊಂಡ ಘಟನೆ ವರದಿಯಾಗಿದೆ.
ತಾನು ಸಿಬಿಐ ಕಚೇರಿಯಿಂದ ಬಂದಿದ್ದೇನೆ ಎಂದು ಕರೆ ಮಾಡಿ ವಿವರ ಕೇಳಿದ್ದು, ಆಗ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವಾಟ್ಸಾಪ್ ವಿಡಿಯೋ ಕಾಲ್‍ನಲ್ಲಿ ಬಂದು ಬ್ಯಾಂಕ್ ವಿವರಗಳನ್ನು ತೆಗೆದುಕೊಂಡಿದ್ದಾನೆ. ಮುಂಬೈನಲ್ಲಿರುವ ಗೃಹಿಣಿಯ ಬ್ಯಾಂಕ್ ಖಾತೆಯಲ್ಲಿ ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮತ್ತು ಸುಳ್ಳು ಬಂಧನ ವಾರಂಟ್ ತೋರಿಸಿದ್ದರಿಂದ ಭಯಗೊಂಡು ಹಣ ನೀಡಲಾಯಿತೆಂದು ಗೃಹಿಣಿ ತಿಳಿಸಿದ್ದಾರೆ.
ಹಣವನ್ನು ನೀಡಿದರೆ ಪ್ರಕರಣದಿಂದ ಮುಕ್ತಿ ಪಡೆಯಬಹುದು ಎಂದಿದ್ದರು. ಈ ವಿಚಾರವನ್ನು ಬೇರೆಯವರಿಗೆ ಹೇಳಿದರೆ ವಿದೇಶದಲ್ಲಿರುವ ಮಕ್ಕಳ ಕೆಲಸ ಕಳೆದುಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಾರೆ. ತರುವಾಯ, ಅವರು ನಮೂದಿಸಿದ ಖಾತೆಗಳಿಗೆ 1,86,62,000 ರೂಪಾಯಿಗಳನ್ನು ಹಲವಾರು ಬಾರಿ ಕಳುಹಿಸಲಾಗಿದೆ.
ಹಣ ನೀಡಿದ ಬಳಿಕ ವಂಚಕರ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಇದನ್ನು ವಂಚನೆ ಎಂದು ಗುರುತಿಸಲಾಗಿದೆ. ನಂತರ ಕಾಂಜಿರಪಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠ ಶಾಹುಲ್ ಹಮೀದ್ ತಿಳಿಸಿದ್ದಾರೆ.