HEALTH TIPS

ಮೀಯಪದವಲ್ಲಿ ದಿ.ಯಂ ರಾಮಕೃಷ್ಣ ರಾವ್ 19ನೇ ಪುಣ್ಯತಿಥಿ: ಸಂಸ್ಮರಣೆ ಹಾಗೂ ಸನ್ಮಾನ

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ , ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿರುವ ದಿ.ಯಂ ರಾಮಕೃಷ್ಣ ರಾವ್ ಅವರ 19ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳವಾರ  ಶಾಲಾ ರಂಗಮಂಟಪದಲ್ಲಿ ಜರಗಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ವಹಿಸಿ ದಿವಂಗತರ ಸಾಧನೆಗಳನ್ನು ನೆನೆದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಎಸ್.ವಿ.ವಿ.ಎಚ್.ಎಸ್.ಎಸ್.ಕೊಡ್ಲಮೊಗರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಐ.ಶಂಕರನಾರಾಯಣ ಭಟ್ ಅವರು ಮಾತನಾಡಿ, ರಾಮಕೃಷ್ಣರಾಯರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡರು.


ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧರಾದ ಉದಯಕುಮಾರ್ ಎಂ ಇವರನ್ನು ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು.ಸನ್ಮಾನಿತರ ಪರಿಚಯ ಪತ್ರವನ್ನು ಶಾಲಾ ಅಧ್ಯಾಪಕರಾದ ಹರೀಶ್ ಸುಲಾಯ ಒಡ್ಡoಬೆಟ್ಟು ವಾಚಿಸಿದರು.2023-24 ನೇ ಸಾಲಿನಲ್ಲಿ ಕಣ್ಣೂರು ಯೂನಿವರ್ಸಿಟಿ ಬಿ ಎ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಶಾಲಾ ಹಳೆ ವಿದ್ಯಾರ್ಥಿನಿ ಆದಿಶ್ರೀ ಎಸ್ ಎನ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.ಅಭಿನಂದನಾ ಪತ್ರವನ್ನು ಶಾಲಾ ಹಿರಿಯ ಅಧ್ಯಾಪಕ ರಾಮಚಂದ್ರ ಕೆ ಎಂ ವಾಚಿಸಿದರು. ಮಂಜೇಶ್ವರ ಬಿ ಪಿ ಸಿ ಜೋಯ್ ಶುಭ ಹಾರೈಸಿದರು. ಶಾಲಾ ವ್ಯವಸ್ಥಾಪಕಿ ರಾಜೇಶ್ವರಿ ಎಸ್ ರಾವ್ ಉಪಸ್ಥಿತರಿದ್ದರು.   ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ.ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ವಂದಿಸಿದರು. ಅಧ್ಯಾಪಕರಾದ ಸುನಿಲ್ ಕುಮಾರ್ ಹಾಗೂ ಅಧ್ಯಾಪಕಿ ಸ್ವಾತಿ ಟಿ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries