ಕಾಸರಗೋಡು: ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ವಿಶ್ವ ತೆಂಗು ದಿನಾಚರಣೆ ಸೆ. 2ರಂದು ಸಿಪಿಸಿಆರ್‍ಐ ಸಭಾಂಗಣದಲ್ಲಿ ಜರುಗಲಿದೆ. 2009 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗಿನ ದಿನವನ್ನು ಸಿಪಿಸಿಆರ್‍ಐ ವತಿಯಿಂದ ಆಚರಿಸಲಾಗುತ್ತಿದೆ.
ಕೇರಳ ಕೃಷಿ ಖಾತೆ ಸಚಿವ ಪಿ. ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತೋಟಗಾರಿಕಾ ವಿಜ್ಞಾನ ವಿಭಾಗದ ಮಹಾನಿರ್ದೇಶಕ ಉಪನಿರ್ದೇಶಕ ಡಾ.ಎಸ್.ಕೆ.ಸಿಂಗ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ ನೆಲ್ಲಿಕುನ್ನು, ಬೆಂಗಳೂರು ಐಸಿಎಆರ್-ಎಟಿಎಆರ್‍ಐ ನಿರ್ದೇಶಕ ಡಾ. ವಿ, ವೆಂಕಟಸುಬ್ರಮಣ್ಯಂ, ಅಮೃತ್‍ಪುರಿ ಎಚ್‍ಉಟಿ ಲ್ಯಾಬ್ ನಿರ್ದೇಶಕ ಡಾ. ರಾಜೇಶ್ ಅತಿಥಿಯಾಗಿ ಭಾಗವಹಿಸುವರು. ರೈತರು, ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು, ಉದ್ಯಮಿಗಳು, ಉತ್ಪಾದಕ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರು ಪಾಲ್ಗೊಳ್ಳುವರು.
ಕೃಷಿ ಉದ್ಯಮದಲ್ಲಿ ತೆಂಗಿನ ಬೆಳೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು, ತೆಂಗು ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು ಮತ್ತು ಸುಸ್ಥಿರ ತೆಂಗು ಉತ್ಪಾದನಾ ಅಭ್ಯಾಸಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಿಪಿಸಿಆರ್ ಪರಿಗಣನೆ ನೀಡುತ್ತಿರುವುದರ ಜತೆಗೆ ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಲೆ ಅಸ್ಥಿರತೆ, ಕೃಷಿ ಮತ್ತು ಇತರ ಕಾರ್ಯಗಳಿಗೆ ನುರಿತ ಮಾನವಶಕ್ತಿಯ ಕೊರತೆಯ ಸಮಸ್ಯೆಗಳಿಂದ ತೆಂಗಿನ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ಬಗ್ಗೆ ಸಕಾಲಿಕ ಮಾಹಿತಿಯನ್ನೂ ಒದಗಿಸುತ್ತಿರುವುದಾಘಿ ಸಿಪಿಸಿಆರ್‍ಐ ಪ್ರಕಟಣೆ ತಿಳಿಸಿದೆ.