ಕಾಸರಗೋಡು : ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘದÀ 56 ನೇ ದೇಶೀಯ ಸಮ್ಮೇಳನ ಸಪ್ಟೆಂಬರ್ 20 ರಿಂದ 22 ರ ವರೆಗೆ ತ್ರಿಶೂರ್ ಶಂಕರ್ ಹಾಲಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಸಮಾರಂಭದ ಅಂಗವಾಗಿ ಸೆ.20 ರಂದು ಗಣಪತಿ ಹವನ, ಉದ್ಘಾಟನೆ, ಪ್ರತಿನಿಧಿ ಸಮ್ಮೇಳನ, ಮತ್ತು ಸಿನಿಮಾ ಪ್ರದರ್ಶನ ನಡೆಯಲಿದೆ. 21 ರಂದು ಕ್ಷೇತ್ರ ಸಮ್ಮೇಳನ, ಮಹಿಳಾ ಸಮ್ಮೇಳನ, ಸಾಂಸ್ಕøತಿಕ ಸಮ್ಮೇಳನ,ಯುವ ವೇದಿಕೆ ಸಮ್ಮೇಳನ, ಸಾರ್ವಜನಿಕ ಸಮ್ಮೇಳನ, ಚುಣಾವಣೆ, ವಿವಿಧ ವಿನೋದಾವಳಿಗಳು,ಸಿನೆಮಾ ಪ್ರದರ್ಶನ ನಡೆಯಲಿದೆ. 22 ರಂದು ಅಭಿನಂದನಾ ಕಾರ್ಯಕ್ರಮ, ಬಹುಮಾನ ವಿತರಣೆ, ವಾಣಿಜ್ಯ ಸಮ್ಮೇಳನ, ಚುನಾವಣೆಯ ಫಲಿತಾಂಶ, ಲಕ್ಕಿ ಡಿಪ್, ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ, ಸಮಾರೋಪ ಸಮಾರಂಭ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸಮ್ಮೇಳನ ಯಶಸ್ವಿಗೆ ಕಾಸರಗೋಡಿನಲ್ಲಿ ಸಿದ್ದತಾ ಸಭೆ ನಡೆಯಿತು.