ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿಯ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮತ್ತೊಮ್ಮೆ ಪ್ರಶಸ್ತಿ ಒದಗಿಬಂದಿದೆ. 'ಟಿಬಿ ಮುಕ್ತ ಆರೋಗ್ಯ 2023-2025' ಪ್ರಶಸ್ತಿಗೆ ಕುಟುಂಬ ಆರೋಗ್ಯ ಕೇಂದ್ರ ಭಾಜನವಾಗಿದೆ.ಮಿನಿಸ್ಟ್ರೀ ಆಫ್ ಹೆಲ್ತ್ ಆಂಡ್ ಫ್ಯಾಮಿಲೀ ವೆಲ್ಪೇರ್ ಈ ಪ್ರಶಸ್ತಿ ಘೋಷಿಸಿದೆ.
2023 ರಲ್ಲಿ ಕೇರಳದ 60 ಸ್ಥಳೀಯಾಡಳಿತಗಳು (59 ಪಂಚಾಯತ್‍ಗಳು ಮತ್ತು 1 ನಗರಸಭೆ) ಬಿ ಎಲ್.ಎಸ್.ಡಿ. ಗಳನ್ನು ಟಿ.ಬಿ.ಮುಕ್ತವಾಗಿ ಘೋಷಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾ.ಪಂ.ನಿಂದ ಮೊದಲ ಟಿ. ಬಿ ಮುಕ್ತ ಪಂಚಾಯತಿ ಎಂಬ ಮಾನ್ಯತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮಾಣಪತ್ರ ಮತ್ತು ಪ್ರಶಸ್ತಿಯನ್ನು ಪಡೆಯಲಾಗಿದೆ.
ಈ ಉದ್ದೇಶಕ್ಕಾಗಿ, 2023ರ ಆ.1 ರಂದು ಪ್ರಾರಂಭವಾದ ಎರಡನೇ ಹಂತದ ಯೋಜನೆಯು "ಟಿಬಿ ಮುಕ್ತ ಬೆಳ್ಳೂರು" ಆಗಿ ಗಮನಾರ್ಹವಾಯಿತು. ಕುಳದಪಾರೆಯನ್ನು ಪೈಲಟ್ ವಾರ್ಡ್ ಎಂದು ಘೋಷಿ, 13 ವಾರ್ಡ್‍ಗಳಿಂದ 1000ಕ್ಕೂ ಹೆಚ್ಚು ಮಾದರಿಗಳನ್ನು ವಿವಿಧ ಡಿಎಂಸಿಗಳಿಗೆ ಕಳುಹಿಸಲಾಗಿತ್ತು. ಮೊದಲ ಹಾಗೂ ಎರಡನೇ ಹಂತದ ಈ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ಆರೋಗ್ಯ ಸಿಬ್ಬಂಧಿಗಳು, ಜನಪ್ರತಿನಿಧಿಗಳು, ನಾಗರಿಕರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ. ಶ್ರೀಧರ ಅಭಿನಂದನೆ ಸಲ್ಲಿಸಿದ್ದು, ಮುಂದಿನ ಯಶಸ್ಸಿಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.