ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಉದ್ಯೋಗ ಕೇಂದ್ರದ ಸಂಯುಕ್ತಾಶ್ರಯದಲ್ಲಿ 'ಪ್ರಯುಕ್ತಿ-2024' ಮೆಗಾ ಉದ್ಯೋಗ ಮೇಳ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಮೇಳ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ವಿದ್ಯಾವಂತ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಇಲಾಖೆ ನೇತೃತ್ವದಲ್ಲಿ ಆಯೋಜಿಸುವ ಉದ್ಯೋಗ ಮೇಳಗಳು ಶ್ಲಾಘನೀಯ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾಸರಗೋಡು ನಗರಸಭೆ ಅಧ್ಯಕ್ಷ ಅಬ್ಬಾಸ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಎಂಡೋಸಲ್ಫಾನ್ ಸೆಲ್ ಅಪರ ಜಿಲ್ಲಾಧಿಕಾರಿ ಪಿ.ಸುರ್ಜಿತ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ನಗರಸಭಾ ಸದಸ್ಯೆ ಸವಿತಾ, ಸರ್ಕಾರಿ ಕಾಲೇಜು ಪ್ರಾಂಶುಪಾಲ ವಿ.ಎಸ್.ಅನಿಕ್‍ಕುಮಾರ್, ಪ್ರಾಧ್ಯಾಪಕ ಎಂ. ರಾಜೀವನ್ ಮತ್ತು ಕೆ.ಲಕ್ಷ್ಮಿ ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ ಉದ್ಯೋಗಾಧಿಕಾರಿ ಅಜಿತ್‍ಜಾನ್ ಸ್ವಾಗತಿಸಿದರು. ಉದ್ಯೋಗಾಧಿಕಾರಿ ಪಿ.ಪವಿತ್ರನ್ ವಂದಿಸಿದರು. ಉದ್ಯೋಗ ಮೇಳದಲ್ಲಿ 908 ಉದ್ಯೋಗಾರ್ಥಿಗಳು ಮತ್ತು 46 ಉದ್ಯೋಗದಾತರು ಭಾಗವಹಿಸಿದ್ದರು. ಇವರಲ್ಲಿವಿವಿಧ ಸಂಸ್ಥೆಗಳ 208 ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗಿದ್ದು, 426 ಅಭ್ಯರ್ಥಿಗಳ ಶಾರ್ಟ್‍ಲಿಸ್ಟ್ ತಯಾರಿಸಲಾಗಿದೆ. ಶಾರ್ಟ್‍ಲಿಸ್ಟ್ ಮಾಡಿದ ಅಭ್ಯರ್ಥಿಗಳು ತಮ್ಮ ಸಂಸ್ಥೆಗಳಲ್ಲಿ ಎರಡನೇ ಸುತ್ತಿನ ಸಂದರ್ಶನಗಳನ್ನು ಹೊಂದಿರುತ್ತಾರೆ.