ಮಂಜೇಶ್ವರ: ಕಿಂಗ್ ಮಾಸ್ಟರ್ ಕಾಸರಗೋಡು ಇದರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಆಲ್ ಎಂಪ್ಲಾಯೀಸ್ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 21 ರಂದು ಮಿಯಪದವು ಶಾಲಾ ಮೈದಾನದಲ್ಲಿ ಜರಗಲಿದೆ.ಈ ಬಗ್ಗೆ ಪೂರ್ವಭಾವೀ ಸಭೆ ಮೀಯಪದವಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ನಿರ್ವಹಿಸುವರು. ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಂಗಣದ ಉದ್ಘಾಟನೆಯನ್ನು ದೈವದ ಪಾತ್ರಿ, ವಕೀಲ ಭರತ್ ರಾಜ್ ಅಟ್ಟೆಗೋಳಿ ನೆರವೇರಿಸಲಿರುವರು. ವ್ಯವಸ್ಥಾಪಕ ಉದಯ್ ಸಾರಂಗ್ ಅವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಮುಳ್ಳೆರಿಯಾ (ನಿವೃತ್ತ ಮುಖ್ಯೋಪಾಧ್ಯಾಯರು) ಇಸ್ಮಾಯಿಲ್ ಮಾಸ್ತರ್(ಮುಖ್ಯೋಪಾಧ್ಯಾಯರು), ಪ್ರದೀಪ್ ಡಿಸೋಜ ಮಿಯಪದವು, ನಯನ್ ಕುಮಾರ್ ಕುಂಟಾರ್, ಮಂಜುನಾಥ್ ಕಾರ್ಲೆ,ಪವನ್ ಕುಮಾರ್ ಹೊಸಂಗಡಿ, ರಾಜೇಶ್ ಮೊಂತೆರೊ, ಸುನಿಲ್ ಡಿ ಸೋಜ ಬಾಯಿಕಟ್ಟೆ, ಸಂಜೀವ ಮಾಸ್ತರ್, ಶ್ಯಾಮ್ ರಂಜಿತ್, ಮಿಥುನ್ ಮಾಸ್ತರ್, ಪ್ರಿಜ್ಜು ಬಳ್ಳಾರ್, ರಾಜೇಶ್ ಕೊಡ್ಲಮೊಗರು ಮೊದಲಾದವರು ಉಪಸ್ಥಿತರಿರುವರು.
ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಕೂಡ್ಲು ಬಹುಮಾನ ವಿತರಿಸುವರು. ಕ್ರೀಡಾಕೂಟದ ವ್ಯವಸ್ಥಾಪಕ ಅಶೋಕ್ ಕೊಡ್ಲಮೊಗರು ಅವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸಿ.ಪಿ. ರಫೀಸ್ ಸುಲ್ತಾನ್(ಗ್ರೀನ್ ಕೈರಲಿ ವೆಲ್ಫೇರ್ ನ ರಾಜ್ಯ ಸಮಿತಿ ಸದಸ್ಯರು), ಡಿ.ಇ.ಒ ಇಬ್ರಾಹಿಂ ಬುಡ್ರಿಯ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ(ಕಸಾಪ ಜಿಲ್ಲಾಧ್ಯಕ್ಷ), ಚಿತ್ರಾವತಿ ಟೀಚರ್ ಚಿಗುರುಪಾದೆ, ಉದಯ್ ಬೆದ್ರಡ್ಕ, ವಿಠಲ್ ನಾರಾಯಣ ಬಂಬ್ರಾಣ, ಮನೋಜ್ ಧ್ವನಿ ಮೀಡಿಯ, ಸಚಿನ್ ಬತ್ತೇರಿ, ರವಿ ರಾವ್ ಮೀಯಪದವು, ತೌಸಿಫ್ ಮೊದಲಾದವರು ಉಪಸ್ಥಿತರಿರುವರು.