ಪೆರ್ಲ: ಏಕದಂತ ಬಳಗ ಪೆರ್ಲ ಹಾಗೂ ಬೇಂಗಪದವು ಶ್ರೀ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಘಟಕ ಸಹಯೋಗದೊಂದಿಗೆ ಆಯುರ್ವೇದ ಉಚಿತ ವೈದ್ಯಕೀಯ ಶೀಬಿರ ಸೆ. 22ರಂದು ಮಧ್ಯಹ್ನ 2.30ರಿಂದ ಬೇಂಗಪದವು ಶಾಲೆಯಲ್ಲಿ ಜರುಗಲಿರುವುದು.
ನಿವೃತ್ತ ಮುಖ್ಯ ಶಿಕ್ಷಕ ಸೋಮಾಜೆ ಗೋಪಾಲಕೃಷ್ಣ ಭಟ್ ಶಿಬಿರ ಉದ್ಘಾಟಿಸುವರು. ಬೇಂಗಪದವು ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಎಸ್, ಏಕದಂತ ಬಳಗದ ಸಂಚಾಲಕ ರಮೇಶ್ ಕುರಡ್ಕ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಗೌರವ ಉಪಸ್ಥಿತರಿರುವರು. ಡಾ. ಸತ್ಯನಾರಾಯಣ ಬಿ ಹಾಗೂ ಡಾ> ಕೃಷ್ಣ ಮೋಹನ ಬಿ.ಆರ್ ಪೆರ್ಲ ಶಿಬಿರಾರ್ಥಿಗಳ ತಪಾಸಣೆ ನಡೆಸುವರು. ಶಿಬಿರಾರ್ಥಿಗಳಿಗೆ ಉಚಿತ ಔಷಧ ವಿತರಣೆ ನಡೆಯುವುದು.