HEALTH TIPS

ಲೆಬನಾನ್ | ಸಿರಿಯಾ ಕಾರ್ಮಿಕರಿದ್ದ ಕಟ್ಟಡದ ಮೇಲೆ ಇಸ್ರೇಲ್ ದಾಳಿ: 23 ಮಂದಿ ಸಾವು

 ಬೈರೂತ್‌: ಸಿರಿಯಾದ ಕಾರ್ಮಿಕರು ವಾಸವಿದ್ದ ಕಟ್ಟಡದ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯಿಂದಾಗಿ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ಲೆಬನಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಸಿರಿಯಾ ಗಡಿಗೆ ಹೊಂದಿಕೊಂಡಿರುವ ಲೆಬನಾನ್‌ನ ಪೂರ್ವ ಬೆಕ್ಕಾ ಕಣಿವೆಯ ಪುರಾತನ ನಗರಿ ಬಾಲ್‌ಬೆಕ್‌ನಲ್ಲಿ ಬುಧವಾರ ರಾತ್ರಿ ದಾಳಿ ನಡೆದಿದೆ ಎಂದು 'ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.

ಕಟ್ಟಡಗಳ ಅವಶೇಷಗಳಡಿಯಿಂದ 23 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಯುನೈನ್ ಗ್ರಾಮದ ಮೇಯರ್‌ ಅಲಿ ಕಸ್ಸಸ್ ಅವರನ್ನು ಉಲ್ಲೇಖಿಸಿ ವಾಹಿನಿ ವರದಿ ಮಾಡಿದೆ. ನಾಲ್ವರು ಸಿರಿಯನ್ನರು ಹಾಗೂ ಲೆಬನಾನ್ ನಾಗರಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries