ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ, ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿರುವ ದಿ.ಯಂ ರಾಮಕೃಷ್ಣ ರಾವ್ ಅವರ 19ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸೆ. 24 ಮಂಗಳವಾರ ಶಾಲಾ ರಂಗಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ವಹಿಸುವರು. ಕಾರ್ಯಕಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ವಿ.ವಿ.ಎಚ್.ಎಸ್.ಎಸ್.ಕೊಡ್ಲಮೊಗರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಐ ಶಂಕರನಾರಾಯಣ ಭಟ್ ಉಪಸ್ಥಿತರಿರುವರು. ಇದೇ ಸಂದರ್ಭ ಶಾಲಾ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ಉದಯಕುಮಾರ್ ಎಂ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಾಲಾ ಹಳೆ ವಿದ್ಯಾರ್ಥಿನಿ ಆದಿಶ್ರೀ ಎಸ್ ಎನ್ ಇವರಿಗೆ ಅಭಿನಂದನೆ ಕಾರ್ಯಕ್ರಮ ಜರಗಲಿದೆ ಎಂದು ಶಾಲಾ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.