HEALTH TIPS

ವಾಳಯಾರ್ ಹುಡುಗಿಯರ ಮಾನಹಾನಿ ಮಾಹಿತಿ ಪ್ರಸರಣೆ: 24ನ್ಯೂಸ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸುವ ಸಾಧ್ಯತೆ

ಕೊಚ್ಚಿ: ವಾಳಯಾರ್ ಬಾಲಕಿಯರ ವಿರುದ್ಧ ಕೆಟ್ಟ ಹೇಳಿಕೆ ನೀಡಿದ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಎಂ.ಜೆ.ಸೋಜನ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಅಧಿಕಾರಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ನೀಡಲಾಗಿದೆ. ವಾಹಿನಿಯೊಂದರ ಮೂಲಕ ಹುಡುಗಿಯರ ಬಗ್ಗೆ ಕೆಟ್ಟ ಟೀಕೆ ಮಾಡಿದ್ದು ಪ್ರಕರಣವಾಗಿತ್ತು.

ಆದರೆ ಪ್ರಕರಣ ದಾಖಲಿಸಬೇಕಿರುವುದು ಅಧಿಕಾರಿಯ ವಿರುದ್ಧವಲ್ಲ,  ಪೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ ಮಾಧ್ಯಮ ಸಂಸ್ಥೆಯ ವಿರುದ್ಧ ಎಂದು ನ್ಯಾಯಾಲಯದ ಗಮನಸೆಳೆದಿದೆ. ಈ ಆದೇಶದ ಪ್ರತಿಯನ್ನು ಡಿಜಿಪಿಗೆ ಕಳುಹಿಸಬೇಕು ಮತ್ತು ರಾಜ್ಯ ಪೆÇಲೀಸ್ ಮುಖ್ಯಸ್ಥರು ಮಾಧ್ಯಮ ಸಂಸ್ಥೆಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

24 ನ್ಯೂಸ್ ಚಾನೆಲ್ ವಿರುದ್ಧ ಹೈಕೋರ್ಟ್ ಈ ಉಲ್ಲೇಖ ಮಾಡಿದೆ. ಸತ್ಯಾಸತ್ಯತೆಯನ್ನು ಖಾತ್ರಿಪಡಿಸದೆ ಸಂತ್ರಸ್ತರನ್ನು ಅವಮಾನಿಸುವ ಟೀಕೆಗಳ ಪ್ರಸಾgದ ವಿರುದ್ದÀ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಚಾನೆಲ್ ವಿರುದ್ಧ ಪೋಕ್ಸೋ ದಾಖಲಿಸಬಹುದು. ಅಗತ್ಯ ಬಿದ್ದರೆ ವರದಿಗಾರನ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಎ ಬದರುದ್ದೀನ್ ಈ ಆದೇಶ ನೀಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries