HEALTH TIPS

ಕಣಿಪುರ ಕ್ಷೇತ್ರದಲ್ಲಿ ಸೆ.29 ರಂದು ಭಕ್ತಿರಸ ಕಾರ್ಯಾಗಾರ: ಸಿದ್ದತಾ ಸಭೆ-ಖ್ಯಾತ ಗಾಯಕ ಶಂಕರ್ ಶ್ಯಾನುಭೋಗ್ ಸಾರಥ್ಯ-ಗಾಯನ ಕಮ್ಮಟ


ಕುಂಬಳೆ: ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ಸೆಪ್ಟೆಂಬರ್ 29 ರಂದು ದಿನಪೂರ್ತಿ ಇದೇ ಮೊದಲಬಾರಿಗೆ ವಿಶೇಷ ಭಜನಾ ಕಮ್ಮಟ ಜರುಗಲಿದೆ.

ಕನ್ನಡದ ಖ್ಯಾತ ಗಾಯಕ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟವನ್ನು  ಕಾಸರಗೋಡಿನ ಜನಪ್ರಿಯ ಸಾಂಸ್ಕøತಿಕ ಸಂಸ್ಥೆ  ರಂಗಚಿನ್ನಾರಿಯ ಸಹ ಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸುತ್ತಿದೆ.

ಕನ್ನಡದ ಖ್ಯಾತ ಗಾಯಕ  ಶಂಕರ್ ಶ್ಯಾನುಭೋಗ್ ನೇತೃತ್ವದಲ್ಲಿ ನಡೆಯುವ ಭಕ್ತಿರಸ ಕಾರ್ಯಾಗಾರವು ಭಜನೆ, ಭಾವಗೀತೆ ಕಲಿಕೆಗೆ ಸೀಮಿತವಾಗಿದ್ದು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಲಿದೆ. ಕನ್ನಡನಾಡಿನ ದಾಸ ಪರಂಪರೆಯ ಗಾಯನ ಮತ್ತು ಭಾವಗೀತೆಗಳನ್ನು ವಿನೂತನ ಧಾಟಿಯಲ್ಲಿ ಕಲಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.

ಇದರಲ್ಲಿ ಪಾಲ್ಗೊಳ್ಳುವವರಿಗೆ ಹಾಡುವುದಕ್ಕಿಂತ ಭಿನ್ನವಾಗಿ ಹೊಸ ರಾಗ, ಶೈಲಿ ಕಲಿಯುವ ಅವಕಾಶ ಒದಗಲಿದೆ. ಸೆ.29 ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ 4 ರ ತನಕ ಭಕ್ತಿರಸ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ ಸುಮಾರು 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ಶನಿವಾರ ನಡೆದ ಭಜಕರ ಸಿದ್ದತಾ ಸಭೆಯಲ್ಲಿ ನಿರ್ಣಯಿಸಿ ಖಚಿತಪಡಿಸಲಾಯಿತು. ಸಮಾರಂಭದ ಸಮಾರೋಪ ಸಭೆಯಲ್ಲಿ ನಾಡಿನ ಅತ್ಯಂತ ಹಿರಿಯ ಭಜನಾರ್ಥಿಗಳನ್ನು ಅನ್ವೇಷಿಸಿ, ಗುರುತಿಸಿ ನಗದು ಸಹಿತ ಗೌರವ ಸನ್ಮಾನ ನೀಡಲು ನಿರ್ಣಯಿಸಲಾಯಿತು.

ರಂಗಚಿನ್ನಾರಿ ಸಂಸ್ಥೆಯ ಸಂಚಾಲಕ, ರಂಗಕರ್ಮಿ  ಕಾಸರಗೋಡು ಚಿನ್ನಾ ಆಶಯ ಮಂಡಿಸಿ ಭಕ್ತಿರಸ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಹರಿದಾಸ,ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು.

ಸಿದ್ದತಾ ಸಭೆಯಲ್ಲಿ ಪ್ರಾದೇಶಿಕ ಸಂಘಟನಾ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಕುಂಬಳೆ, ಉಪಾಧ್ಯಕ್ಷ ಸತೀಶ್ ನಾಯ್ಕಾಪು, ಕಾರ್ಯದರ್ಶಿ ಮಧುಸೂಧನ ಕಾಮತ್ ಹಾಗೂ ಊರ ಪ್ರಮುಖರು ಕುಂಬಳೆ ಸಮೀಪದ ಭಜನಾ ತರಬೇತುದಾರರು, ಭಜನಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಶಿಬಿರಾರ್ಥಿಗಳು ತಮ್ಮ ಹೆಸರನ್ನು ಸತೀಶ್ ನಾಯ್ಕಾಪು 9995712070, ಪ್ರೇಮಾ ಶೆಟ್ಟಿ 9037284743, ಮಧುಸೂದನ ಕಾಮತ್ 9447380970 ಇವರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕಾಸರಗೋಡು ಚಿನ್ನಾ ಅವರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries