ತಿರುವನಂತಪುರಂ: ದೇಶದ ನಿರುದ್ಯೋಗ ದರದಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ. ಕೇರಳದಲ್ಲಿ ನಿರುದ್ಯೋಗ ದರ ಶೇ.29.9 ರಷ್ಟಿದೆ.
ಕೇರಳದ ನಂತರ ನಾಗಾಲ್ಯಾಂಡ್ (27.4), ಅರುಣಾಚಲ ಪ್ರದೇಶ (20.9) ಮತ್ತು ಮಣಿಪುರ (22.9) ನಿರುದ್ಯೋಗದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಂಡಮಾನ್ (33.6) ಮತ್ತು ಲಕ್ಷದ್ವೀಪ (36.2) ಅತಿ ಹೆಚ್ಚು ನಿರುದ್ಯೋಗ ದರವನ್ನು ಹೊಂದಿರುವ ರಾಜ್ಯಗಳಾಗಿವೆ.
ಕೇಂದ್ರೀಯ ಅಂಕಿಅಂಶ ಕಚೇರಿಯಿಂದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ ವರದಿ ಈ ಅಂಕಿಅಂಶ ನೀಡಿದೆ. ದೇಶದ ನಿರುದ್ಯೋಗ ದರದ ಪ್ರಕಾರ ಶೇ.10.2.ರಷ್ಟಿದೆ.
ಮಧ್ಯಪ್ರದೇಶ ಅತ್ಯಂತ ಕಡಿಮೆ ನಿರುದ್ಯೋಗ ದರವನ್ನು ಹೊಂದಿದೆ. 2.6 ರಷ್ಟು ಜನರು ಮಾತ್ರ ಇಲ್ಲಿ ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗದ ವಿಷಯದಲ್ಲಿ, ಮಧ್ಯಪ್ರದೇಶದ ಜೊತೆಗೆ ಗುಜರಾತ್ 3.1 ಪ್ರತಿಶತ ಮತ್ತು ಜಾರ್ಖಂಡ್ 3.6 ಶೇಕಡಾ ಇದೆ.
ಕೇರಳದಲ್ಲಿ ಯುವಕರಿಗಿಂತ ಯುವತಿಯರೇ ಹೆಚ್ಚು ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲಿ 15 ರಿಂದ 29 ವರ್ಷ ವಯಸ್ಸಿನ 47.1 ರಷ್ಟು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಈ ವಯೋಮಾನದ ಶೇಕಡ 19.1ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಕೇಂದ್ರೀಯ ಸಮೀಕ್ಷೆ ತಿಳಿಸಿದೆ.
ತಮಿಳುನಾಡು ಶೇ.15.3, ಕರ್ನಾಟಕ ಶೇ.10.2 ಮತ್ತು ಆಂಧ್ರಪ್ರದೇಶ ಶೇ.17.5 ರಷ್ಟು ಹೊಂದಿದೆ.
2024 ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 64.33 ಕೋಟಿ ಜನರು ಉದ್ಯೋಗದಲ್ಲಿದ್ದಾರೆ. ಉದ್ಯೋಗಿಗಳ ಸಂಖ್ಯೆ ಮತ್ತು ಒಟ್ಟು ಜನಸಂಖ್ಯೆಯ ನಡುವಿನ ಅನುಪಾತವನ್ನು ಲೆಕ್ಕಹಾಕಿದರೆ, 2018 ರ ಆರ್ಥಿಕ ವರ್ಷದಲ್ಲಿ 100 ರಲ್ಲಿ 34.7 ಜನರು ಉದ್ಯೋಗದಲ್ಲಿದ್ದರೆ, 2024 ರ ಆರ್ಥಿಕ ವರ್ಷದಲ್ಲಿ ಅದು 44.2 ಕ್ಕೆ ಏರಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸÀಲು ಮತ್ತು ಜನರಿಗೆ ಕೌಶಲ್ಯ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸಲು ಸರ್ಕಾರ ಜಾರಿಗೆ ತಂದ ದಕ್ಷ ಯೋಜನೆಗಳು ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ.
2022-23 ರಲ್ಲಿ 57.9% ರಿಂದ 2023-24 ರಲ್ಲಿ 60.1% ಗೆ ಮಹಿಳಾ ಭಾಗವಹಿಸುವಿಕೆಯ ಪ್ರಮಾಣವು 37.0% ರಿಂದ 41.7% ಕ್ಕೆ ಏರಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸುತ್ತದೆ, ಆದರೆ ಪುರುಷರ ಭಾಗವಹಿಸುವಿಕೆಯ ಪ್ರಮಾಣವು 78.5% ರಿಂದ 78 ಏರಿಕೆಯಾಗಿದೆ.